ರಾಯಚೂರು: ತಾಲೂಕಿನ ಕುರ್ವಕಲಾ ನಡುಗಡ್ಡೆ ಪ್ರದೇಶದಲ್ಲಿ ತೆಪ್ಪ ಮಗುಚಿ ತೆಪ್ಪದಲ್ಲಿ ತೆರಳುತ್ತಿದ್ದ 13 ಜನರ ಪೈಕಿ 9 ಮಂದಿ ಈಜಿ ದಡ ಸೇರಿದ್ರೆ, ಇನ್ನುಳಿದ ನಾಲ್ವರು ನದಿಯಲ್ಲಿ ನಾಪತ್ತೆಯಾಗಿದ್ದಾರೆ.
ತೆಪ್ಪ ಮಗುಚಿ ನಾಲ್ವರು ನಾಪತ್ತೆ: ಕೃಷ್ಣಾ ನದಿಯಲ್ಲಿ ಮುಂದುವರೆದ ಶೋಧ ಕಾರ್ಯ ನಾಪತ್ತೆಯಾದವರನ್ನು ಪತ್ತೆ ಹಚ್ಚುವ ಕಾರ್ಯ ನಿನ್ನೆಯಿಂದ ನಡೆದಿದ್ದು, ಇಂದು ಬೆಳಗ್ಗೆಯಿಂದ ಎನ್‌ಡಿಆರ್‌ಎಫ್, ಅಗ್ನಿಶಾಮಕ ತಂಡ ಶೋಧ ಕಾರ್ಯ ನಡೆಸಿವೆ. ಎನ್‌ಡಿಆರ್‌ಎಫ್‌ನ 23 ಜನ, ಅಗ್ನಿಶಾಮಕ ದಳದ 12, ಮೇಕನಾಯಜಡ ಬೋಟ್ನ 3 ಜನರ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಎನ್‌ಡಿಆರ್‌ಎಫ್, ಅಗ್ನಿಶಾಮಕ ತಂಡದಿಂದ ಶೋಧ ಕಾರ್ಯ 9 ಜನರನ್ನ ರಕ್ಷಿಸಿದ ನಾವಿಕರು: ತೆಪ್ಪದಲ್ಲಿದ್ದ 13 ಜನರಲ್ಲಿ 9 ಜನರನ್ನು ನಾಲ್ವರು ನಾವಿಕರು ರಕ್ಷಣೆ ಮಾಡಿದ್ದಾರೆ. ಶ್ರೀಪಾದ, ನರಸಿಂಹಲು, ಆದಿಲಿಂಗಪ್ಪ, ಇಡಪ್ಪ ಎಂಬ ನಾವಿಕರು ರಕ್ಷಣೆ ಮಾಡುವಲ್ಲಿ ಯಶ್ವಸಿಯಾಗಿದ್ದಾರೆ.
ರಾಯಚೂರು ತಾಲೂಕಿನ ಕುರ್ವಕಲಾ ನಡುಗಡ್ಡೆ ಪ್ರದೇಶದ ನಿವಾಸಿಗಳಾದ ಇವರು, ನಿತ್ಯ ಬಳಕೆ ವಸ್ತುಗಳನ್ನು ತರಲು ತೆಲಂಗಾಣದ ಮಕ್ತಲ್ ತಾಲೂಕಿನ ಪಂಚಾಪಾಡಿಗೆ ತೆರಳಿದ್ರು. ಪಂಚಾಪಾಡಿನಿಂದ ವಾಪಸ್ ಬರುವಾಗ ಮಕ್ತಲ್ ಠಾಣೆ ವ್ಯಾಪ್ತಿಯಲ್ಲಿ ತೆಪ್ಪ ಮುಗುಚಿದೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್, ಎಸ್ಪಿ ನಿಕ್ಕಂ ಪ್ರಕಾಶ್ ಅಮೃತ್, ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಭೇಟಿ ನೀಡಿದ್ರು.