ರಾಯಚೂರು:ಕೆಲ ದಿನಗಳ ಹಿಂದೆ ಇಂಗ್ಲೆಂಡ್‌ನಿಂದ ಮರಳಿದ ಜಿಲ್ಲೆಯ 17 ಜನರಲ್ಲಿ 13 ಜನರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಯುಕೆಯಿಂದ ರಾಯಚೂರಿಗೆ ಬಂದ 13 ಜನರ ಕೊರೊನಾ ವರದಿ ನೆಗೆಟಿವ್ - ಕೊರೊನಾ ವರದಿ ನೆಗೆಟಿವ್
ಇಂಗ್ಲೆಂಡ್‌ನ ರೂಪಾಂತರ ಕೊರೊನಾ ವೈರಸ್ ದೇಶಾದ್ಯಂತ ತಲ್ಲಣ ಮೂಡಿಸಿದೆ. ಅಂತೆಯೇ ಇಂಗ್ಲೆಂಡ್‌ನಿಂದ ಬಂದ 17 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, 13 ಜನರ ವರದಿ ನೆಗೆಟಿವ್ ಬಂದಿದೆ.
ರಾಯಚೂರು
ಇಂಗ್ಲೆಂಡ್‌ನಲ್ಲಿ ರೂಪಾಂತರ ಕೊರೊನಾ ವೈರಸ್ ಪತ್ತೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಇಂಗ್ಲೆಂಡ್‌ನಿಂದ ಆಗಮಿಸಿದವರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲು ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. 17 ಜನರಲ್ಲಿ 13 ಜನರ ವರದಿ ನೆಗೆಟಿವ್ ಬಂದಿದೆ.
ಇನ್ನುಳಿದ ನಾಲ್ವರು ರಾಯಚೂರು ಮೂಲಕ ಆಂಧ್ರದ ಕರ್ನೂಲ್ ಜಿಲ್ಲೆಯ ಬೇತಂಚರ್ಲಾಕ್ಕೆ ತೆರಳಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.