ರಾಯಚೂರು:ಭತ್ತ ಕಟಾವು ಮಾಡುವ ಖಾಸಗಿ ಯಂತ್ರಗಳು ಗಂಟೆಗೆ 2 ಸಾವಿರ ರೂಪಾಯಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ದರ ನಿಗದಿಗೊಳಿಸಿ ಆದೇಶಿಸಿದ್ದಾರೆ.
ರಾಯಚೂರು: ಭತ್ತ ಕಟಾವು ಮಾಡುವ ಖಾಸಗಿ ಯಂತ್ರಗಳಿಗೆ ದರ ನಿಗದಿ - ರಾಯಚೂರಿನಲ್ಲಿ ಭತ್ತ ಕಟಾವಿಗೆ ಯಂತ್ರಗಳ ಬಳಕೆ ಸುದ್ದಿ
ಭತ್ತ ಕಟಾವು ಮಾಡುವ ಖಾಸಗಿ ಯಂತ್ರಗಳ ದರವನ್ನ ನಿಗದಿಗೊಳಿಸಿ ರಾಯಚೂರು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಆದೇಶಿಸಿದ್ದಾರೆ.
ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ 1,62,836 ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿರುವ ಭತ್ತ ಕಟಾವಿಗೆ ಬಂದಿದೆ. ರೈತರು ಕೃಷಿ ರೈತಧಾರೆ ಯೋಜನೆ ಮೂಲಕ ಭತ್ತ ಕಟಾವು ಮಾಡಲು ಯಂತ್ರ ಪಡೆದುಕೊಂಡು ಅದರ ಲಾಭ ಪಡೆಯಬಹುದು.
ಇನ್ನು ಭತ್ತ ಕಟಾವು ಖಾಸಗಿ ಯಂತ್ರಗಳ ಮಾಲೀಕರು 2,200 ರಿಂದ 2,500 ರೂಪಾಯಿವರೆಗೆ ಪ್ರತಿಗಂಟೆಗೆ ಬಾಡಿಗೆ ಪಡೆಯುತ್ತಿದ್ದಾರೆ ಅಂತಾ ದೂರು ಬಂದಿದೆ. ಕೋವಿಡ್-19 ಎಫೆಕ್ಟ್ ನಿಂದ ರೈತ ಸಮುದಾಯ ಈಗಾಗಲೇ ಸಂಕಷ್ಟದಲ್ಲಿದೆ. ಹೀಗಾಗಿ ಭತ್ತ ಕಟಾವು ಮಾಡುವ ಹಾರ್ವೆಸ್ಟಿಂಗ್ ಯಂತ್ರಗಳ ಮಾಲೀಕರು ಗಂಟೆಗೆ 2 ಸಾವಿರ ಬಾಡಿಗೆ ಪಡೆಯುವಂತೆ ಆದೇಶಿಸಲಾಗಿದೆ. ಈ ಆದೇಶವನ್ನ ಕಡ್ಡಾಯವಾಗಿ ಖಾಸಗಿ ಯಂತ್ರಗಳ ಮಾಲೀಕರು ಪಾಲಿಸಬೇಕು. ಇಲ್ಲವಾದಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
TAGGED:
ಭತ್ತ ಯಂತ್ರ ಕಟಾವಿಗೆ ದರ ನಿಗದಿ