ರಾಯಚೂರು: ಜಿಲ್ಲೆಯ ಭತ್ತದ ಬೆಳೆಗಾರರ ಜೊತೆ ರಿಲಯನ್ಸ್ ರಿಟೇಲ್ ಲಿಮಿಟೆಡ್ ಭತ್ತ ಕೊಂಡುಕೊಳ್ಳಲು ಒಪ್ಪಂದ ಮಾಡಿಕೊಂಡಿರುವ ಕಾರಣ ಸ್ಥಳೀಯ ಅಕ್ಕಿ ಗಿರಿಣಿ ಮಾಲೀಕರಿಗೆ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಕೃಷ್ಣ, ತುಂಗಭದ್ರಾ ನದಿಗಳೆರಡು ಹರಿಯುತ್ತಿವೆ. ನೀರಿನ ಲಭ್ಯತೆಯಿಂದ ಜಿಲ್ಲೆಯ ಮಾನವಿ, ಸಿರವಾರ, ಮಸ್ಕಿ, ದೇವದುರ್ಗ, ಲಿಂಗಸೂಗೂರು, ರಾಯಚೂರು ತಾಲೂಕಿನಲ್ಲಿ ಅತಿ ಹೆಚ್ಚಾಗಿ ಸೋನಾಮಸೂರಿ ಭತ್ತ ಬೆಳೆಯಲಾಗುತ್ತದೆ. ಸ್ಥಳೀಯ ಅಕ್ಕಿಗಿರಿಣಿ ಮಾಲೀಕರು ಸೋನಾ ಮಸೂರಿ ಅಕ್ಕಿಯನ್ನ ತಯಾರಿಸಿ ರಾಜ್ಯ, ಅಂತಾರಾಜ್ಯ, ವೀದೇಶಿಗಳಿಗೆ ರಪ್ತು ಮಾಡುತ್ತಾರೆ.