ಕರ್ನಾಟಕ

karnataka

ETV Bharat / state

ಐಎಎಸ್ ಕೋಚಿಂಗ್​ ತೆರಳಿ ವಾಪಸಾಗಿ ಕ್ವಾರಂಟೈನ್​ನಲ್ಲಿದ್ದ ಕೆಲವರ ಬಿಡುಗಡೆ - raichur latest news

ಕೆಲ ದಿನಗಳ ಹಿಂದೆ ದೆಹಲಿಯಿಂದ ಕಲಬುರ್ಗಿ ಮೂಲಕ ಲಿಂಗಸುಗೂರಿಗೆ ಆಗಮಿಸಿದ್ದ 17 ವಿದ್ಯಾರ್ಥಿಗಳನ್ನು ಮುದಗಲ್ಲ ನವೋದಯ ವಸತಿ ಶಾಲೆ ಹಾಗೂ ಲಿಂಗಸುಗೂರು ಬಿಸಿಎಂ ವಸತಿ ನಿಲಯದಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್​ ಮಾಡಲಾಗಿತ್ತು.

Quarantine
ಕ್ವಾರಂಟೈನ್​ನಲ್ಲಿದ್ದ ಕೆಲವರ ಬಿಡುಗಡೆ

By

Published : Jun 1, 2020, 12:39 AM IST

ರಾಯಚೂರು :ಜಿಲ್ಲೆಯಿಂದ ದೆಹಲಿಗೆ ಐಎಎಸ್ ಕೋಚಿಂಗ್ ಪಡೆಯಲು ಹೋಗಿ ವಾಪಸಾಗಿ ಲಿಂಗಸುಗೂರು ಕ್ವಾರಂಟೈನದಲ್ಲಿದ್ದ ಕೆಲವರನ್ನು ಬಿಡುಗಡೆ ಮಾಡಲಾಯಿತು.

ಕೆಲ ದಿನಗಳ ಹಿಂದೆ ದೆಹಲಿಯಿಂದ ಕಲಬುರ್ಗಿ ಮೂಲಕ ಲಿಂಗಸುಗೂರಿಗೆ ಆಗಮಿಸಿದ್ದ 17 ವಿದ್ಯಾರ್ಥಿಗಳನ್ನು ಮುದಗಲ್ಲ ನವೋದಯ ವಸತಿ ಶಾಲೆ ಹಾಗೂ ಲಿಂಗಸುಗೂರು ಬಿಸಿಎಂ ವಸತಿ ನಿಲಯದಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್​ ಮಾಡಲಾಗಿತ್ತು.

ರಾಯಚೂರು ಸೇರಿದಂತೆ ವಿವಿಧ ತಾಲ್ಲೂಕುಗಳ ವಿದ್ಯಾರ್ಥಿಗಳನ್ನು ಲಿಂಗಸುಗೂರಲ್ಲಿ ವಿಶೇಷ ಆದ್ಯತೆ ನೀಡಿ, ಸಾಮಾನ್ಯ ಜನರಿಂದ ಪ್ರತ್ಯೇಕ ಕ್ವಾರಂಟೈನ್​ ಮಾಡಲಾಗಿತ್ತು. ಇದು ಪ್ರಗತಿಪರ ಚಿಂತಕರ ಟೀಕೆಗೂ ಗುರಿಯಾಗಿತ್ತು. ಕ್ವಾರಂಟೈನ್ ಇರಿಸುವಲ್ಲಿಯು ತಾರತಮ್ಯ ಸಲ್ಲದು ಎಂಬ ಆರೋಪಗಳು ಕೇಳಿ ಬಂದಿದ್ದವು.

17 ವಿದ್ಯಾರ್ಥಿಗಳ ಪೈಕಿ ಇಂದು ಲಿಂಗಸುಗೂರು ಕ್ವಾರಂಟೈನ್ ಕೇಂದ್ರದಿಂದ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಮುದಗಲ್ಲ ಕ್ವಾರಂಟೈನ್ ಕೇಂದ್ರದಿಂದ ಐವರನ್ನು ಬಿಡುಗಡೆಗೊಳಿಸಲಾಯಿತು.

ABOUT THE AUTHOR

...view details