ರಾಯಚೂರು: ನಾರಾಯಣಪುರ ಜಲಾಶಯದಿಂದ ಇಂದು ಬೆಳಗ್ಗೆ 6 ಗಂಟೆಗೆ 2.10 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1.67 ಲಕ್ಷ ಕ್ಯೂಸೆಕ್ ನೀರನ್ನ 16 ಕ್ರಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ ಹರಿ ಬೀಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಪ್ರವಾಹ ಭೀತಿ ತಗ್ಗಿದೆ.
ರಾಯಚೂರು: ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು - Raichur Narayanapura reservoir reservoir News
ನಾರಾಯಣಪುರ ಜಲಾಶಯದಿಂದ ಬೆಳಗ್ಗೆ 6 ಗಂಟೆಗೆ 2.10 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, 1.67 ಲಕ್ಷ ಕ್ಯೂಸೆಕ್ ನೀರನ್ನ 16 ಕ್ರಸ್ಟ್ ಗೇಟ್ ಮೂಲಕ ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
![ರಾಯಚೂರು: ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು](https://etvbharatimages.akamaized.net/etvbharat/prod-images/768-512-8523151-709-8523151-1598157821282.jpg)
ನಾರಾಯಣಪುರ ಜಲಾಶಯಕ್ಕೆ ತಗ್ಗಿದ ಒಳಹರಿವು
ನಿನ್ನೆ 2 ಲಕ್ಷ ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗಿತ್ತು. ಆದರೆ ಇಂದು 1.67 ಲಕ್ಷ ಕ್ಯೂಸೆಕ್ ನೀರನ್ನ ನದಿಗೆ ಹರಿಸಲಾಗುತ್ತಿರುವುರಿಂದ ಕೊಂಚ ಪ್ರವಾಹ ಭೀತಿ ಕಡಿಮೆಯಾಗಿದೆ.
ಒಂದು ವೇಳೆ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಳವಾದಲ್ಲಿ ಮತ್ತೆ ಪ್ರವಾಹ ಭೀತಿ ಶುರುವಾಗಲಿದೆ.