ರಾಯಚೂರು:ಜಿಲ್ಲೆಯ ಬೃಹತ್ ಶಾಖೋತ್ಪನ್ನ ಕೇಂದ್ರದ 8 ಘಟಕಗಳ ಪೈಕಿ 6 ಘಟಕಗಳ ವಿದ್ಯುತ್ ಉತ್ಪಾದನೆ ಸ್ಥಗೀತಗೊಳಿಸಲಾಗಿದೆ.
ರಾಯಚೂರು ಶಾಖೋತ್ಪನ್ನ ಕೇಂದ್ರದ 6 ಘಟಕಗಳಲ್ಲಿ ಉತ್ಪಾದನೆ ಸ್ಥಗಿತ - ವಿದ್ಯುತ್ ಕೇಂದ್ರಗಳಿಗೆ ರೆಸ್ಟ್
ರಾಯಚೂರಿನ ಶಾಖೋತ್ಪನ್ನ ಕೇಂದ್ರದ 8 ಘಟಕಗಳಲ್ಲಿ 6 ಅನ್ನು ಸ್ಥಗಿತಗೊಳಿಸಲಾಗಿದ್ದು, 2 ಘಟಕಗಳಿಂದ ಮಾತ್ರ ವಿದ್ಯುತ್ ಉತ್ಪಾದಿಸಲಾಗುತ್ತಿದೆ.
1720 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ 8 ಘಟಕಗಳಲ್ಲಿ 1ರಿಂದ 7ರ ಪ್ರತೀ ಘಟಕ 210 ಮೆಗಾವ್ಯಾಟ್ ಮತ್ತು 8ನೇ ಘಟಕ 250 ಮೆಗಾವ್ಯಾಟ್ ವಿದ್ಯುತ್ ಸಾಮರ್ಥ್ಯ ಹೊಂದಿದೆ. ಆದರೆ, ರಾಜ್ಯದಲ್ಲಿ ಶಾಖೋತ್ಪನ್ನ ಮೂಲಗಳಿಗೆ ವಿದ್ಯುತ್ ಬೇಡಿಕೆ ಕುಸಿತದ ಹಿನ್ನಲೆಯಿಂದಾಗಿ ಕೇವಲ 2, 8ನೇ ಘಟಕಗಳಿಂದ 460 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದ್ದು, ಉಳಿದ 6 ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.
ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಜಲ ಮೂಲಗಳಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಹೀಗಾಗಿ ಶಾಖೋತ್ಪನ್ನಗಳ ವಿದ್ಯುತ್ ಕೇಂದ್ರಗಳಿಗೆ ರೆಸ್ಟ್ ನೀಡಲಾಗಿದೆ ಎನ್ನಲಾಗಿದೆ.