ರಾಯಚೂರು:ಕಾಮುಕನೊಬ್ಬ ಆಕಳು ಕರುವನ್ನು ಕಟ್ಟಿ ಹಾಕಿ ರೇಪ್ ಮಾಡಿರುವ ವಿಚಿತ್ರ ಘಟನೆ ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಸಬಾ ಲಿಂಗಸೂಗೂರು ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. 25 ವರ್ಷದ ವ್ಯಕ್ತಿ ಅತ್ಯಾಚಾರವೆಸಗಿದ ಆರೋಪಿಯಾಗಿದ್ದಾನೆ.
ಸ್ಥಳೀಯರೊಬ್ಬರಿಗೆ ಸೇರಿದ ಆಕಳು ಕರುವಿನ ಮೇಲೆ ಪೈಶಾಚಿಕ ಕೃತ್ಯ ನಡೆಸಿದ್ದಾನೆ. ಕರುವಿನ ಮಾಲೀಕ ಎಂದಿನಂತೆ ತಮ್ಮ ಜಾನುವಾರುಗಳನ್ನು ಹೊಲಕ್ಕೆ ಮೇಯಿಸಲು ಕರೆದುಕೊಂಡು ಹೋಗಿದ್ದಾರೆ. ಜಮೀನನಲ್ಲಿ ಮೇಯಿಸಲು ಬಿಟ್ಟು ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿಯೇ ಇದ್ದ ಕಾಮುಕ ಕರುವಿನ ಕಾಲು ಕಟ್ಟಿ, ಸೆಕ್ಸ್ ಮಾಡಿದ್ದಾನೆ. ಹೊಲದಲ್ಲಿ ಆರೋಪಿಯು ಕರುವಿನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ಬಗ್ಗೆ ಮಾಲೀಕ ಆರೋಪಿಸಿದ್ದಾರೆ.