ಕರ್ನಾಟಕ

karnataka

ETV Bharat / state

ಬಾಲಕಿ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್​ - raichuru minor girl rape case

ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಸೆರೆ ಹಿಡಿಯುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

rape-accused-arrested-in-raichuru
ಎಸ್ಪಿ ಡಾ ಸಿ ಬಿ ವೇದಮೂರ್ತಿ

By

Published : Feb 3, 2020, 11:48 PM IST

ರಾಯಚೂರು: ಅಪ್ರಾಪ್ತೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿಯನ್ನ ಸೆರೆ ಹಿಡಿಯಲಾಗಿದೆ ಎಂದು ಎಸ್ಪಿ ಡಾ. ಸಿ. ಬಿ. ವೇದಮೂರ್ತಿ ತಿಳಿಸಿದ್ದಾರೆ.

ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರತ್ನಾಪುರ ಹಟ್ಟಿ ಗ್ರಾಮದ ನಿವಾಸಿ ಸಣ್ಣಪಾಮಪ್ಪ ಆಲಿಯಾಸ್ ಪಾಮಣ್ಣ ಬಂಧಿತ ಆರೋಪಿ. ಕಳೆದ ಜ. 24ರಂದು ಸಿಂಧನೂರಿನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಮಗಳನ್ನ ಪಾನಮತ್ತನಾದ ತಂದೆವೋರ್ವ ಮನೆಗೆ ಕರೆದೊಯ್ಯುತ್ತಿದ್ದ. ಮಾರ್ಗ ಮಧ್ಯ ವಾಹನ ಚಾಲನೆ ಮಾಡಲು ಸಾಧ್ಯವಾಗದಿದ್ದಾಗ ಆರೋಪಿ ಪಾಮಣ್ಣನಿಗೆ ಗ್ರಾಮಕ್ಕೆ ಬಿಟ್ಟು ಬರುವಂತೆ ಹೇಳಿದ್ದ.

ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿ ಪರಾರಿಯಾಗಿದ್ದ ಆರೋಪಿ ಕಂಬಿ ಹಿಂದೆ

ಆದ್ರೆ ಇದೇ ಸಮಯವನ್ನ ಬಳಸಿಕೊಂಡು ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ. ಈ ಕುರಿತು ಬಾಲಕಿಯ ತಾಯಿ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಅತ್ಯಾಚಾರವೆಸಗಿದ ಕಾಮುಕನ ಕುರಿತು ಸುಳಿವು ಅಥವಾ ಯಾರು ಎಂಬುದು ತಿಳಿದಿರಲಿಲ್ಲ.

ಬಾಲಕಿಯನ್ನ ಕರೆದೊಯ್ದ ಸಿಲ್ವರ್ ಬಣ್ಣದ ಬೈಕ್ ನ ಸುಳಿವಿನ ಮೇಲೆ ಶೋಧ ನಡೆಸುವ ಮೂಲಕ ಕಾಮುಕನನ್ನ ಹೆಡೆಮುರಿ ಕಟ್ಟಿದ್ದು, ಬೈಕ್ ನ್ನ ಸಹ ವಶಕ್ಕೆ ಪಡೆದು, ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗದೆ ಎಂದು ಎಸ್​ಪಿ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details