ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ : ರಂದೀಪ್‌ ಸಿಂಗ್ ಸುರ್ಜೇವಾಲಾ ಆಕ್ರೋಶ - ಕೇಂದ್ರ ಸರ್ಕಾರದ ವಿರುದ್ದ ರಣದೀಪ್‌ಸಿಂಗ್ ಸುರ್ಜೇವಾಲಾ ಆಕ್ರೋಶ

ರಾಜ್ಯದಲ್ಲಿ ಜನರ ವೋಟಿನಿಂದ ಬಂದ ಸರ್ಕಾರವಲ್ಲ. ಬಿಎಸ್​ವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ‌. ಬಿಎಸ್‌ವೈ ಮೇಲೆ ಭ್ರಷ್ಟಾಚಾರ ಆರೋಪವಿತ್ತಾ? ಅಥವಾ ಇಡಿ ಒತ್ತಡ ಹೇರಲಾಗಿತ್ತಾ?. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ? ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ. ಹೀಗಾಗಿ, ಈ ಸರ್ಕಾರ ಅನೈತಿಕ ಸರ್ಕಾರವಾಗಿದೆ..

ranadeep-singh-surjewala-talk-about-bjp-govt
ರಣದೀಪ್‌ಸಿಂಗ್ ಸುರ್ಜೇವಾಲಾ

By

Published : Aug 17, 2021, 8:46 PM IST

Updated : Aug 17, 2021, 10:49 PM IST

ರಾಯಚೂರು :ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ಅಭಿವೃದ್ಧಿ ವಿರೋಧಿ ಸರ್ಕಾರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಂದೀಪ್‌ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್​ನಲ್ಲಿ ಆಯೋಜಿಸಿದ ಕಲಬುರಗಿ ವಿಭಾಗೀಯ ಮಟ್ಟದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಈಗಿನ ಬಿಜೆಪಿ ಸರ್ಕಾರ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಈ ಭಾಗದಲ್ಲಿ ಕೇವಲ 3 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಹೀಗಾಗಿ, ಈ ಭಾಗದಲ್ಲಿ ಅಭಿವೃದ್ಧಿ ಮಾಡುವ ಉದ್ದೇಶ ಬಿಜೆಪಿಗಿಲ್ಲ ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ‌ರಂದೀಪ್‌ ಸಿಂಗ್ ಸುರ್ಜೇವಾಲಾ

ಈ ಭಾಗಕ್ಕೆ 1500 ಕೋಟಿ ನೀಡುವುದಾಗಿ ಹೇಳಿ ಕೆಕೆಆರ್​ಡಿಬಿಗೆ 630 ಕೋಟಿ ಬಿಡುಗಡೆ ಮಾಡಿದೆ‌. ಈ ಮೊತ್ತದ ಅನುದಾನದಲ್ಲಿ ಏನು ಅಭಿದ್ಧಿ ನಿರೀಕ್ಷೆ ಮಾಡಲು ಸಾಧ್ಯ?. ಕೋವಿಡ್ ಸಮಯದಲ್ಲಿ ಸಕಾಲಕ್ಕೆ ರವಾನಿಸಿಲ್ಲ. ಇದರಿಂದಾಗಿ ರೆಮಿಡಿಷನ್ ಇಂಜೆಕ್ಷನ್ 25,000 ರೂಪಾಯಿವರೆಗೆ ಮಾರಾಟ ಮಾಡಲಾಗಿದೆ.

ರೋಗಿಗಳ ಚಿಕಿತ್ಸೆಗೆ ಐಸಿಯು ಬೆಡ್ ಅವಶ್ಯಕತೆಯಿತ್ತು. ಆದರೆ, ಐಸಿಯು ಬೆಡ್‌ಗಳ ಸರಿಯಾದ ವ್ಯವಸ್ಥೆ ಮಾಡದೆ ಇರುವುದರಿಂದ ರೋಗಿಗಳು ಪರದಾಡಿದ್ದರು. ಕೋವಿಡ್ ಮೃತಪಟ್ಟವರಿಗೆ ಪ್ರಮಾಣ ಪತ್ರವನ್ನ ಒದಗಿಸಬೇಕು. ಆದರೆ, ಸಾವಿನ ಪ್ರಮಾಣ ಪತ್ರ ಸಂಬಂಧಿಕರಿಗೆ ಸಹ ನೀಡಲಾಗುತ್ತಿಲ್ಲವೆಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ದೊಡ್ಡ ವಿಶ್ವಾಸದ್ರೋಹ :ಪ್ರಧಾನಿ ನರೇಂದ್ರ ಮೋದಿ ತೊಗರಿ ಬೆಳೆಗಾರರ ಮೇಲೆ ಕಾಳಜಿಯಿಲ್ಲದೆ ಗದಾ ಪ್ರಹಾರ ನಡೆಸಿದ್ದಾರೆ. ಬೆಳೆಗಾರಿಗೆ ಬೆಂಬಲ ಬೆಲೆ ಇದುವರೆಗೂ ಪಾವತಿಯಾಗಿಲ್ಲ. ತೊಗರಿ ಬೆಳೆ ಆಮದು ಸಹ ರದ್ದು ಮಾಡಲಾಗಿದೆ. ಇದಕ್ಕಿಂತ ದೊಡ್ಡ ವಿಶ್ವಾಸದ್ರೋಹ, ಮೋಸ ದೊಡ್ಡದಿಲ್ಲ ಎಂದು ಕಿಡಿಕಾರಿದರು.

ಅನೈತಿಕ ಸರ್ಕಾರವಾಗಿದೆ :62 ಕೋಟಿ ರೈತರು ಬೀದಿಗೆ ಬಿದ್ದಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ರೈತರ ಜಮೀನು ಮಾರಾಟ ಮಾಡುವ ಸಂಚು ನಡೆಯುತ್ತಿದೆ. 371(ಜೆ) ತಿದ್ದುಪಡಿ ಮಾಡಲಾಗಿತ್ತು. ಆದ್ದರಿಂದ, ಸರ್ಕಾರಿ ನೇಮಕಾತಿ ನಿಲ್ಲಿಸಲಾಗಿದೆ. ಹಿಂದೆ ಪ್ರವಾಹ ಬಂದಾಗ 1500 ಕೋಟಿ ಪರಿಹಾರ ನೀಡಿದ್ದರು.

ರಾಜ್ಯದಲ್ಲಿ ಜನರ ವೋಟಿನಿಂದ ಬಂದ ಸರ್ಕಾರವಲ್ಲ. ಬಿಎಸ್​ವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ‌. ಬಿಎಸ್‌ವೈ ಮೇಲೆ ಭ್ರಷ್ಟಾಚಾರ ಆರೋಪವಿತ್ತಾ? ಅಥವಾ ಇಡಿ ಒತ್ತಡ ಹೇರಲಾಗಿತ್ತಾ?. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ? ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ. ಹೀಗಾಗಿ, ಈ ಸರ್ಕಾರ ಅನೈತಿಕ ಸರ್ಕಾರವಾಗಿದೆ ಎಂದರು.

ಇಂದು ನಡೆದ ಸಭೆ ಕಾಂಗ್ರೆಸ್ ಸಂಘಟನೆ ಬಲಪಡಿಸಲು ನಡೆಸಲಾಗಿದೆ‌. ಗ್ರಾಮ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಪಕ್ಷ ಬಲಗೊಳಿಸುವ ಉದ್ದೇಶವಿದೆ. ಪಕ್ಷ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು ಎಂದು ತಿಳಿಸಿದರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಸ್‌.ಆರ್.ಪಾಟೀಲ್, ಬಿ.ವಿ.ನಾಯಕ್, ಎನ್.ಎಸ್.ಬೋಸರಾಜ್, ಹೆಚ್.ಮುನಿಯಪ್ಪ ಸೇರಿದಂತೆ ಇತರಿದ್ದರು.

ಓದಿ:370ನೇ ವಿಧಿ ಹಿಂಪಡೆಯದಿದ್ದರೆ ಕಾಶ್ಮೀರಕ್ಕೂ ಅಫ್ಘಾನಿಸ್ತಾನಕ್ಕಾದ ಸ್ಥಿತಿಯೇ ಆಗುತ್ತಿತ್ತೇನೋ.. ಸಂಸದ ರಾಘವೇಂದ್ರ

Last Updated : Aug 17, 2021, 10:49 PM IST

For All Latest Updates

TAGGED:

ABOUT THE AUTHOR

...view details