ಕರ್ನಾಟಕ

karnataka

ETV Bharat / state

ರಂಜಾನ್​​​ ಆಚರಣೆ: ರಾಯಚೂರಲ್ಲಿ ಅತ್ತರ್​​​​ ಮಾರಾಟ ಜೋರು - undefined

ರಂಜಾನ್​ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಅತ್ತರ್ (ಸುಗಂಧ ದ್ರವ್ಯ) ಮಾರಾಟ ಭರದಿಂದ ಸಾಗಿದೆ.

ಅತ್ತರ್

By

Published : May 28, 2019, 4:43 AM IST

ರಾಯಚೂರು: ಮುಸ್ಲಿಂ ಬಾಂಧವರ ಪವಿತ್ರ ಹಬ್ಬಗಳಲ್ಲಿ ಒಂದಾದ ರಂಜಾನ್​ಗೆ ಸಿದ್ಧತೆ ಭರದಿಂದ ನಡೆದಿದೆ. ಈಗಿನಿಂದಲೇ ಬಟ್ಟೆ, ಡ್ರೈಫುಡ್ ಖರೀದಿ ಜೋರಾಗಿ ನಡೆದಿದೆ. ಜೊತೆಗೆ ಹಬ್ಬದ ಹಿನ್ನೆಲೆಯಲ್ಲಿ ಅತ್ತರ್ (ಸುಗಂಧ ದ್ರವ್ಯ) ಮಾರಾಟವು ಜೋರಾಗಿದೆ.

ನಗರದ ಉಸ್ಮಾನಿಯಾ ಮಾರುಕಟ್ಟೆಯ ಹಲವು ವ್ಯಾಪಾರ ಮಳಿಗೆಗಳು ಹಾಗೂ ರಸ್ತೆ ಬದಿಯಲ್ಲಿ ಅತ್ತರ್ ಮಾರಾಟ ನಡೆಯುತ್ತಿದೆ. ತೀನ್ ಖಂದಿಲ್, ಬಜಾರ್ ಸುತ್ತಮುತ್ತ ಹಲವಾರು ವ್ಯಾಪಾರ ಮಳಿಗೆಗಳಲ್ಲಿ ಸುಗಂಧ ದ್ರವ್ಯ ಮಾರಾಟವಾಗುತ್ತಿದೆ. ಅದರೆ ಉಸ್ಮಾನಿಯಾ ಮಸೀದಿ ಕಾಂಪ್ಲೆಕ್ಸ್ ಬಳಿಯ ಸ್ಟಾರ್ ಸೋಡಾ ಜನರಲ್ ಸ್ಟೋರ್ ಅತ್ತರ್ ಸುಗಂಧ ದ್ರವ್ಯ ಮಾರಾಟದ ಫೇಮಸ್ ಅಂಗಡಿ. ಮೆಹಂದಿ, ಟೋಪಿ, ಗಡಿಯಾರ, ಪರ್ಫ್ಯುಮ್, ವಿವಿಧ ಜೆಲ್ ಹಾಗೂ ಇತರೆ ವಸ್ತುಗಳ ಜೊತೆಗೆ ಅತ್ತರ್ ಮಾರಾಟ ಮಾಡಲಾಗುತ್ತಿದೆ.

ರಾಯಚೂರಲ್ಲಿ ಅತ್ತರ್​ ಮಾರಾಟ

ಇಲ್ಲಿ ಝೈನ್, ಮುಶ್ಕಾ, ಫಿರ್ದೋಸ್, ಬಾಖರ್, ಮಝ್ಮಾ, ಐಸ್ ಬರ್ಗ್, ಧೂಮ್, ಬಾಸ್, ಪಹಾಡಿ ಫೂಲ್, ಲಾಲ್ ಪಹಾಡಿ, ಕಚ್ಛಿ ಕಲೀ, ಊದ್ ವೈಟ್, ಊದ್ ಬ್ಲಾಕ್, ಕಶ್ಮೀರ್ ಕೀ ಕಲೀ, ಮ್ಯಾಗ್ನೆಟ್ ಹೀಗೆ ನೂರಾರು ನಮೂನೆಯ ಅತ್ತರ್​ಗಳು ಲಭ್ಯವಿದೆ. 25 ಗ್ರಾಂ ಅತ್ತರ್ ಬೆಲೆ 100ರಿಂದ ಹಿಡಿದು 600 ರೂ.ವರೆಗೆ ಇದೆ. ಮುಂಬೈ, ಅರಬ್​ ಮೂಲದ ಸುಗಂಧ ದ್ರವ್ಯಗಳು ಮಹಾನಗರಗಳ ಮೂಲಕ ಜಿಲ್ಲೆಗೆ ಲಗ್ಗೆ ಇಡುತ್ತಿವೆ.

For All Latest Updates

TAGGED:

ABOUT THE AUTHOR

...view details