ಕರ್ನಾಟಕ

karnataka

ETV Bharat / state

ರಾಂಪೂರ ಏತ ನೀರಾವರಿ ಯೋಜನೆ ಅಧಿಕಾರಿಗಳ ನಿರ್ಲಕ್ಷ್ಯ: ಮನೆಗಳಿಗೆ ನುಗ್ಗಿದ ನೀರು... - Lingasaguru

ರಾಂಪೂರ ಏತ ನೀರಾವರಿ ಯೋಜನೆ 1ನೇ ವಿತರಣ ನಾಲೆ ಲ್ಯಾಟರಲ್ ಆನೆಹೊಸೂರು ಬಳಿ ಪೈಪೊಂದು ದುರಸ್ತಿ ಮಾಡದೆ ಹೋಗಿದ್ದರಿಂದ ಏಕಾ ಏಕಿ ನೀರು ಹರಿಬಿಟ್ಟಿದ್ದು ನೀರು ಜಮೀನುಗಳಿಗೆ ನುಗ್ಗಿದ್ದು, ರೈತರಲ್ಲಿ ಭಯ ಹುಟ್ಟಿಸಿದೆ.

Lingasaguru
ಲಿಂಗಸುಗೂರು

By

Published : Jul 4, 2020, 11:41 PM IST

ಲಿಂಗಸುಗೂರು: ತಾಲ್ಲೂಕಿನ ರಾಂಪೂರ ಏತ ನೀರಾವರಿ ಯೋಜನೆ ಅಧಿಕಾರಿಗಳ ನಿರ್ವಹಣೆ ನಿರ್ಲಕ್ಷ್ಯದಿಂದ ಲ್ಯಾಟರಲ್ ನೀರು ಮನೆ, ಜಮೀನಿಗೆ ನುಗ್ಗಿ ರೈತರಲ್ಲಿ ಭಯ ಹುಟ್ಟಿಸಿದೆ.

ರಾಂಪೂರ ಏತ ನೀರಾವರಿ ಯೋಜನೆ ಅಧಿಕಾರಿಗಳ ನಿರ್ಲಕ್ಷದಿಂದ ಜಮೀನಿಗೆ ನೀರು ನುಗ್ಗಿದೆ.

ರಾಂಪೂರ ಏತ ನೀರಾವರಿ ಯೋಜನೆ 1ನೇ ವಿತರಣ ನಾಲೆ ಲ್ಯಾಟರಲ್ ಆನೆಹೊಸೂರು ಬಳಿ ಪೈಪೊಂದು ದುರಸ್ತಿ ಮಾಡದೆ ಹೋಗಿದ್ದರಿಂದ ಏಕಾ ಏಕಿ ನೀರು ಹರಿಬಿಟ್ಟಿದ್ದು ನೀರು ಜಮೀನುಗಳಿಗೆ ನುಗ್ಗಿದೆ. ಅಕ್ಕ ಪಕ್ಕದ ಮನೆಗಳಿಗೆ ನೀರು ನುಗ್ಗಿದ್ದು ವ್ಯರ್ಥ ನೀರು ಪೋಲಾಗುತ್ತಿದ್ದರೂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಾಲುವೆಗಳ ಮೇಲುಸ್ತುವಾರಿ ಮತ್ತು ನಿರ್ವಹಣೆ ಅವಧಿಯಲ್ಲಿ ಕುಡಿವ ನೀರಿನ ನೆಪದಲ್ಲಿ ಏನೊಂದು ಕೆಲಸ ಕಾರ್ಯ ಮಾಡಿಲ್ಲ. ರೈತರ ಜಮೀನಿಗೆ ನೀರು ಬಿಡುವ ಅವಧಿ ಸಮೀಪಿಸುತ್ತಿದ್ದರು ಕೂಡ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳದಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ರೈತ ಮುಖಂಡರು ದೂರಿದ್ದಾರೆ.

ABOUT THE AUTHOR

...view details