ಕರ್ನಾಟಕ

karnataka

ETV Bharat / state

ಸರ್ಕಾರದ ಆದೇಶದಂತೆ ಲಾಕ್​ಡೌನ್​ ಗೆ ಸಹಕರಿಸೋಣ: ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ - ರಾಯಚೂರು ಕೊರೊನಾ ಸುದ್ದಿ

ರಾಜ್ಯವನ್ನೂ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ. ಹಾಗಾಗಿ ಮಂದಿನ 31ರ ವರೆಗೂ ಸುರಪುರ ನಗರ ಲಾಕ್‌ಡೌನ್ ಆಗಿರಲಿದ್ದು, ನಗರಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ ಇದಕ್ಕೆ ತಾಲೂಕಿನ ಜನತೆ ಸಹಕರಿಸಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಮನವಿ ಮಾಡಿದರು

Corona virus
ಕೊರೊನಾ ಸುದ್ದಿ

By

Published : Mar 25, 2020, 7:42 AM IST

ರಾಯಚೂರು: ಸರ್ಕಾರದ ಆದೇಶದಂತೆ ಸುರಪುರ ನಗರವನ್ನು ಸಂಪೂರ್ಣ ಲಾಕ್‌ಡೌನ್‌ಗೆ ಸಹಕರಿಸುವಂತೆ ತಾಲೂಕಿನ ಜನತೆಗೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲಿ ಲಾಕ್‌ ಡೌನ್‌ ಮಾಡಲಾಗಿದೆ, ಅದರಂತೆ ನಮ್ಮ ರಾಜ್ಯವನ್ನೂ ಲಾಕ್‌ಡೌನ್ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಕರೆ ನೀಡಿದ್ದಾರೆ. ಹಾಗಾಗಿ ಮಂದಿನ 31ರ ವರೆಗೂ ಸುರಪುರ ನಗರ ಲಾಕ್‌ಡೌನ್ ಆಗಿರಲಿದ್ದು, ನಗರಕ್ಕೆ ಯಾರಿಗೂ ಪ್ರವೇಶ ಇರುವುದಿಲ್ಲ ಇದಕ್ಕೆ ತಾಲೂಕಿನ ಜನತೆ ಸಹಕರಿಸಬೇಕೆಂದು ಕರೆ ಕೊಟ್ಟರು.

ಕೊರೊನಾ ಸುದ್ದಿ

ತಾಲೂಕಿನ ಎಲ್ಲ ಪಕ್ಷಗಳ ಎಲ್ಲ ಜಾತಿ ಮತ್ತು ಧರ್ಮದ ಜನರು ತಮ್ಮ ಆಚರಣೆಗಳನ್ನು ಮನೆಗಳಲ್ಲಿ ನಡೆಸಿ ಹೊರಗೆ ಬಾರದಂತೆ ಮುಂಜಾಗ್ರತೆ ವಹಿಸಲು ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವೇಣು ಮಾಧವ ನಾಯಕ ವೇಣು ಗೋಪಾಲ್ ಜೇವರ್ಗಿ ಶಂಕರ ನಾಯಕ ನರಸಿಂಹಕಾಂತ ಪಂಚಮಗಿರಿ ಸೇರಿದಂತೆ ಅನೇಕರಿದ್ದರು.

ABOUT THE AUTHOR

...view details