ರಾಯಚೂರು:ಧಾರಾಕಾರ ಮಳೆ ಸುರಿದ ಪರಿಣಾಮ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ನುಗ್ಗಿದೆ.
ರಾಯಚೂರಿನಲ್ಲಿ ಧಾರಾಕಾರ ಮಳೆ... ತರಗತಿಯೊಳಕ್ಕೆ ನುಗ್ಗಿತು ನೀರು - heavy rain at raichur
ರಾಯಚೂರಿನಲ್ಲಿ ಸುರಿದ ಬಾರೀ ಮಳೆಯಿಂದಾಗಿ ತಾಲೂಕಿನ ಮಿಟ್ಟಿಮಲ್ಕಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಳಗೆ ಮಳೆ ನೀರು ನುಗ್ಗಿದ್ದು, ಶಾಲೆ ಜಲಾವೃತ್ತವಾಗುವ ದೃಶ್ಯ ಕಂಡು ಬಂದಿದೆ.
ರಾಯಚೂರಿನಲ್ಲಿ ಧಾರಾಕಾರ ಮಳೆ ಪರಿಣಾಮ ಶಾಲೆಗೆ ನುಗ್ಗಿತು ನೀರು
ಸಮರ್ಪಕವಾದ ಕಂಪೌಡ ನಿರ್ಮಾಣ ಮಾಡದಿರುವ ಪರಿಣಾಮ ಇಂದಿನ ಮಳೆಗೆ ನೀರು ನೇರವಾಗಿ ತರಗತಿಯೊಳಗೆ ಪ್ರವೇಶಿಸಿ ಅವಾಂತರ ಸೃಷ್ಟಿಸಿದೆ. ಕಂಪೌಂಡ್ ಇಲ್ಲದಿರುವುದರಿಂದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿನ ಚರಂಡಿ ತುಂಬಿ, ಮಳೆಯ ನೀರು ಚರಂಡಿ ನೀರು ಸಮೇತವಾಗಿ ಶಾಲೆಯೊಳಗೆ ನೀರು ನುಗ್ಗಿದೆ.
ಕಲುಷಿತ ನೀರು ಶಾಲೆಗೆ ನುಗ್ಗಿರುವುದರಿಂದ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಶಿಕ್ಷಣ ಇಲಾಖೆ ಕೂಡಲೇ ಶಾಲೆಗೆ ಕಂಪೌಂಡ್ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳ ಹಿತವನ್ನ ಕಾಪಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.