ರಾಯಚೂರು: ಜಿಲ್ಲೆಯಲ್ಲಿ ನಿನ್ನೆಯಿಂದ ಸುರಿಯುತ್ತಿರುವ ತುಂತುರು ಮಳೆಯಿಂದ ಹಿಂಗಾರು ಬಿತ್ತನೆ ಮಾಡಿರುವ ತೊಗರಿ, ಹತ್ತಿ, ಕಡಲೆ, ಬಿಳಿ ಜೋಳ, ಮೆಣಸಿಕಾಯಿ ಬೆಳೆಗಳಿಗೆ ರೋಗ, ಕೀಟಬಾಧೆ ಎದುರಾಗುವ ಭೀತಿ ರೈತರಲ್ಲಿ ಉಂಟಾಗಿದೆ.
ಈಗಾಗಲೇ ರೈತರು ಬಿತ್ತನೆ ಮಾಡಿರುವಂತಹ ಕಡಲೆ, ಬಿಳಿ ಜೋಳ, ಮೆಣಸಿನಕಾಯಿ ಹಾಗೂ ಸಜ್ಜೆ ಸೇರಿದಂತೆ ನಾನಾ ಬೆಳೆಗಳ ಫಸಲು ಬಂದಿದೆ. ನಿನ್ನೆಯಿಂದ ತುಂತುರು ಮಳೆ ಸುರಿಯುತ್ತಿದ್ದು, ಇದರಿಂದ ರಾಶಿ ನಡೆಯುತ್ತಿರುವ ತೊಗರಿಗೆ ಹಾನಿಯಾಗುವ ಭೀತಿ ಎದುರಾಗಿದೆ. ಫಸಲು ಬಂದು ನಿಂತಿರುವ ಬಿಳಿ ಜೋಳ, ಕಡಲೆ, ಮೆಣಸಿನಕಾಯಿ, ಸಜ್ಜೆ ಬೆಳೆಗಳಿಗೆ ರೋಗ ಹಾಗೂ ಕೀಟಬಾಧೆ ತಗುಲುವ ಆತಂಕ ರೈತರಿಗೆ ಎದುರಾಗಿದೆ.