ಕರ್ನಾಟಕ

karnataka

ETV Bharat / state

ನಿನ್ನೆಯಿಂದ ಸುರಿಯುತ್ತಿರುವ ತುಂತುರು ಮಳೆಗೆ ಮಲೆನಾಡಂತಾದ ಬಿಸಿಲೂರು - Corona Latest News

ರಾಜ್ಯದ ಹಲವೆಡೆ ಉತ್ತಮ ಮಳೆಯಗುತ್ತಿದೆ. ಇನ್ನು ಬರದನಾಡು ರಾಯಚೂರಲ್ಲಿ ಹಲವೆಡೆ ಮಳೆಯಾಗುತ್ತಿದ್ದು, ಜನರಲ್ಲಿ ಸಂತಸ ಉಂಟುಮಾಡಿದೆ. ಅಲ್ಲದೆ ನಗರದಲ್ಲಿ ಲಾಕ್​ಡೌನ್ ಜಾರಿಯಲ್ಲಿದ್ದು, ವಾಹನ ಸಂಚಾರ ವಿರಳವಾಗಿದೆ..

Rain in part of city..Raichur Turns like a Malnad
ನಿನ್ನೆಯಿಂದ ಸುರಿಯುತ್ತಿರುವ ತುಂತುರು ಮಳೆಗೆ ಮಲೆನಾಡಂತಾದ ಬಿಸಿಲೂರು

By

Published : Jul 15, 2020, 5:45 PM IST

ರಾಯಚೂರು :ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ನಿರಂತರವಾಗಿ ಜಿಟಿ-ಜಿಟಿ ಮಳೆ ಸುರಿಯುತ್ತಿದೆ.

ನಿನ್ನೆಯಿಂದ ಸುರಿಯುತ್ತಿರುವ ತುಂತುರು ಮಳೆಗೆ ಮಲೆನಾಡಂತಾದ ಬಿಸಿಲೂರು

ಇದರ ಪರಿಣಾಮ ರಾಯಚೂರು ಜಿಲ್ಲೆಯಲ್ಲೀಗ ಮಲೆನಾಡ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗುತ್ತಿದ್ದು, ಚರಂಡಿಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ.

ಇದಲ್ಲದೆ ರಾಯಚೂರು ಹಾಗೂ ಸಿಂಧನೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆ ಲಾಕ್​ಡೌನ್​​ ಸಹ ಜಾರಿಯಲ್ಲಿದ್ದು, ಅಲ್ಲಲ್ಲಿ ಲಾಕ್​ಡೌನ್​ಗೂ ತಲೆಕೆಡಿಸಿಕೊಳ್ಳದ ವಾಹನ ಸವಾರರು ಓಡಾಟ ನಡೆಸಿದ್ದು ಕಂಡು ಬಂದಿದೆ. ಅಂತಹವರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ಮನೆಗೆ ಕಳುಹಿಸುತ್ತಿರುವ ದೃಶ್ಯ ಕಂಡು ಬಂತು.

ABOUT THE AUTHOR

...view details