ರಾಯಚೂರು: ಹಟ್ಟಿ ಗೋಲ್ಡ್ ಮೈನ್ ಕಾರ್ಮಿಕರನ್ನು ಆ್ಯಂಬುಲೆನ್ಸ್ನಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುವ ವೇಳೆ ಗ್ರಾಮಸ್ಥರು ತಡೆಹಿಡಿದಿದ್ದಾರೆ. ಈ ಘಟನೆ ದೇವದುರ್ಗ ತಾಲೂಕಿನ ವಂದಲಿ ಗ್ರಾಮದ ಬಳಿ ನಡೆದಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿನ್ನದ ಗಣಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದ ಗ್ರಾಮಸ್ಥರು - ಆ್ಯಂಬುಲೆನ್ಸ್
ಹಟ್ಟಿ ಗೋಲ್ಡ್ ಮೈನ್ಸ್ ಕಾರ್ಮಿಕರನ್ನ ಆ್ಯಂಬುಲೆನ್ಸ್ನಲ್ಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ವಾಹನವನ್ನು ತಡೆಹಿಡಿದರು.
ಆ್ಯಂಬುಲೆನ್ಸ್ ಅನ್ನು ತುರ್ತು ಆರೋಗ್ಯ ಸೇವೆಗಾಗಿ ಬಳಸಬೇಕು. ಆದರೆ ದೇಶದ ಏಕೈಕ ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳು ಕಾರ್ಮಿಕರನ್ನು ಆ್ಯಂಬ್ಯುಲೆನ್ಸ್ ಮೂಲಕ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿಯಿಂದ ಊಟಿ ಗಣಿಗೆ ಕರೆದುಕೊಂಡು ಹೋಗುವಾಗ ಗ್ರಾಮಸ್ಥರು ತಡೆದಿದ್ದಾರೆ. ಅಷ್ಟೇ ಅಲ್ಲದೆ, ವಾಹನದೊಳಗೆ ಇದ್ದವರು ಸುಮಾರು 50 ವರ್ಷ ಮೇಲ್ಪಟ್ಟವರು ಎಂದು
ಈ ಹಿಂದೆ ಗ್ರಾಮಸ್ಥರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಸಹ ಮತ್ತೆ ಕಾರ್ಮಿಕರನ್ನು ಆ್ಯಂಬುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ವಾಹನವನ್ನು ತಡೆದಿದ್ದಾರೆ.