ಕರ್ನಾಟಕ

karnataka

ಕೊರೊನಾ ನಾಶಕ್ಕೆ ಸಿದ್ದರಾದ ಬಿಸಿಲೂರ ಪೊಲೀಸ್​: ಸಂಚಾರ ನಿಯಂತ್ರಣಕ್ಕೆ ನಗರದಲ್ಲಿ 4000 ಬ್ಯಾರಿಕೇಡ್​

ಲಾಕ್​ಡೌನ್​ ಉಲ್ಲಂಘನೆ ತಡೆಯಲು ರಾಯಚೂರು ಜಿಲ್ಲಾ ಪೊಲೀಸ್​ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿದ್ದು, ಮುಂಜಾಗೃತ ಕ್ರಮವಾಗಿ ಜಿಲ್ಲೆಯ ನಾನಾ ಕಡೆಯಲ್ಲಿ ಸುಮಾರು 4 ಸಾವಿರ ಬ್ಯಾರಿಕೇಡ್​ ಹಾಕಲಾಗಿದ್ದು, ಸುಖಾ ಸುಮ್ಮನೆ ಸಂಚಾರ ಮಾಡುವ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.

By

Published : Apr 17, 2020, 3:59 PM IST

Published : Apr 17, 2020, 3:59 PM IST

raichuru-police-kept-4000-barricade-to-avoid-traffic
ರಾಯಚೂರು ಜಿಲ್ಲಾ ಪೊಲೀಸ್

ರಾಯಚೂರು : ಲಾಕ್ ಡೌನ್ ಮಧ್ಯ ಅನಗತ್ಯವಾಗಿ ಜಿಲ್ಲೆಯಲ್ಲಿ ವಾಹನಗಳ ಓಡಾಟ ಕಂಡು ಬರುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಡಾವಣೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ.

ಜಿಲ್ಲೆಯ ಸಿಂಧನೂರು, ಮಾನ್ವಿ, ಸಿರವಾರ, ಲಿಂಗಸುಗೂರು, ರಾಯಚೂರು ಸೇರಿದಂತೆ ನಾನಾ ಕಡೆ ಒಂದು ಬಡಾವಣೆಯಿಂದ ಮತ್ತೊಂದು ಬಡಾವಣೆಗೆ ಹೋಗದಂತೆ ಸರಿಸುಮಾರು 4 ಸಾವಿರ ಕಡೆ ಬ್ಯಾರಿಕೇಡ್ ಹಾಕಲಾಗಿದೆ. ಅಲ್ಲದೆ, ಬ್ಯಾರಿಕೇಡ್​ ಹಾಕಿರುವ ಏರಿಯಾದ ನಿವಾಸಿಗಳಿಗೆ ತೊಂದರೆಯಾಗದಂತೆ ದಿನನಿತ್ಯ ಬಳಕೆಯ ವಸ್ತುಗಳನ್ನು ತಲುಪಿಸುವ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.

ಕೊರೊನಾ ನಾಶಕ್ಕೆ ಸಿದ್ದರಾದ ಬಿಸಿಲೂರ ಪೊಲೀಸ್

ಆಸ್ಪತ್ರೆ, ಸರ್ಕಾರಿ ಕಚೇರಿಗೆ ತೆರಳುವವರು, ಅಗತ್ಯ ತುರ್ತು ಸೇವೆ, ಪಾಸ್ ಹೊಂದಿದ್ದವರಿಗೆ ಮಾತ್ರ ಓಡಾಡಲು ಅವಕಾಶ ನೀಡಲಾಗಿದೆ. ಈಗಾಗಲೇ ಅನಗತ್ಯವಾಗಿ ಸಂಚಾರ ಮಾಡಿದ ಸುಮಾರು 3,500 ಹೆಚ್ಚು ವಾಹನಗಳನ್ನ ಸೀಜ್ ಮಾಡುವ ಮೂಲಕದ ದಂಡ ವಿಧಿಸಲಾಗಿದೆ. ಜನ ಸಂಚಾರ ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಾರದ ಹಿನ್ನೆಲೆ ಜಿಲ್ಲೆಯನ್ನು 'ಹಸಿರು ವಲಯ' ಎಂದು ಘೋಷಿಸಲಾಗಿದೆ. ಆದರೂ ಸಹ ಮುನ್ನಚ್ಚೆರಿಕೆ ಕ್ರಮವಾಗಿ ಈ ನಿಯಮಗಳನ್ನು ತರಲಾಗಿದ್ದು, ಸಾರ್ವಜನಿಕರು ಇದಕ್ಕೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮನವಿ ಮಾಡಿದ್ದಾರೆ.

ABOUT THE AUTHOR

...view details