ರಾಯಚೂರು: ಜಿಲ್ಲೆಯ ಜನ ಕೊರೊನಾ ವೈರಸ್ ಭೀತಿ ಎದುರಿಸುತ್ತಿದ್ದಾರೆ. ಆದರೆ, ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬೇಕಾಗಿರುವ ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಜಿಲ್ಲೆಯಲ್ಲಿ ಸಿಗದೇ ಪರದಾಡುವಂತಾಗಿದೆ. ಆರೋಗ್ಯ ಇಲಾಖೆ ಸಚಿವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲಿಯೇ ಇವುಗಳ ಕೊರತೆಯಿದೆ.
ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕೊರೊನಾ ನಿಯಂತ್ರಣಾ ಸಾಮಾಗ್ರಿಗಳ ಕೊರತೆ! - ರಾಯಚೂರಿನಲ್ಲಿ ಮಾಸ್ಕ್ ಕೊರತೆ
ಕೊರೊನಾ ವೈರಸ್ ಹಿನ್ನೆಲೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗೆ ತೆರಳಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ, ಸಚಿವರು ಮಾತ್ರ ಜಿಲ್ಲೆಗೆ ಬಂದು ಅಧಿಕಾರಿಗಳ ಸಭೆಯಾಗಲಿ, ಕೊರೊನಾ ವೈರಸ್ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿಲ್ಲ.
![ಆರೋಗ್ಯ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ಕೊರೊನಾ ನಿಯಂತ್ರಣಾ ಸಾಮಾಗ್ರಿಗಳ ಕೊರತೆ! raichuru facing lack of mask and sanitizers](https://etvbharatimages.akamaized.net/etvbharat/prod-images/768-512-6661368-thumbnail-3x2-ramulu.jpg)
ಕೊರೊನಾ ವೈರಸ್ ಹಿನ್ನೆಲೆ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗೆ ತೆರಳಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಆದರೆ, ಸಚಿವರು ಮಾತ್ರ ಜಿಲ್ಲೆಗೆ ಬಂದು ಅಧಿಕಾರಿಗಳ ಸಭೆಯಾಗಲಿ, ಕೊರೊನಾ ವೈರಸ್ ತೆಗೆದುಕೊಂಡ ಕ್ರಮಗಳ ಬಗ್ಗೆ ಚರ್ಚೆ ನಡೆಸಿಲ್ಲ. ಬದಲಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಪಡೆದುಕೊಂಡಿದ್ದಾರೆಯೇ ಹೊರತು ಈವರೆಗೂ ಜಿಲ್ಲೆಗೆ ಬಂದಿಲ್ಲ.
ಹೀಗಾಗಿ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೇ ಆರೋಗ್ಯ ಇಲಾಖೆ ಸಚಿವರಾಗಿದ್ರೂ ಜಿಲ್ಲೆಗೆ ಅವಶ್ಯಕತೆಯಿರುವ ಸಾಮಾಗ್ರಿಗಳನ್ನ ಸಹ ಪೂರೈಕೆ ಮಾಡದಿರುವುದು ಜಿಲ್ಲೆಯ ಜನರಲ್ಲಿ ಅಸಮಾಧಾನವಿದೆ. ಇದೀಗ ತಡವಾಗಿ ಸಚಿವ ಬಿ.ಶ್ರೀರಾಮುಲು ಜಿಲ್ಲೆಗ ಭೇಟಿ ನೀಡಿ ಕೊರೊನಾ ವೈರಾಣು ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳೊಟ್ಟಿಗೆ ಸಭೆ ನಡೆಸಲ್ಲಿದ್ದಾರೆ ಎನ್ನಲಾಗಿದೆ. ಅಗತ್ಯ ಸಾಮಾಗ್ರಿಗಳ ಪೂರೈಕೆಗೆ ಯಾವೆಲ್ಲಾ ಕ್ರಮಕೈಗೊಳ್ಳುತ್ತಾರೆ ಎನ್ನುವುದನ್ನೂ ಕಾದು ನೋಡಬೇಕಿದೆ.