ಕರ್ನಾಟಕ

karnataka

ಕಲಬುರಗಿಯಿಂದ ರಾಯಚೂರಿಗೆ 2 ವಾರ ಬರಬೇಡಿ: ನೌಕರರಲ್ಲಿ ಎಸ್ಪಿ ಮನವಿ

ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎರಡು ವಾರಗಳ ಕಾಲ ಕಲಬುರಗಿಯಿಂದ ರಾಯಚೂರಿಗೆ ಕೆಲಸಕ್ಕಾಗಿ ಬರುವ ಉದ್ಯೋಗಿಗಳು ದಯವಿಟ್ಟು ನಗರಕ್ಕೆ ಬರಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಮನವಿ ಮಾಡಿದ್ದಾರೆ.

By

Published : Mar 19, 2020, 9:33 PM IST

Published : Mar 19, 2020, 9:33 PM IST

raichuru-district-sp-statement-on-corona-virus
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ. ಬಿ. ವೇದಮೂರ್ತಿ

ರಾಯಚೂರು: ಕೊರೊನಾ ಭೀತಿ ಹಿನ್ನೆಲೆ ಕಲಬುರಗಿ ಜಿಲ್ಲೆಯಿಂದ ರಾಯಚೂರು ನಗರಕ್ಕೆ ಕರ್ತವ್ಯಕ್ಕೆ ಬರುವ ನೌಕರರನ್ನ ಎರಡು ವಾರಗಳ ಕಾಲ ಬರಬೇಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ಹಾಗೂ ಮುಜಾಗ್ರತಾ ಕ್ರಮ ಕೈಗೊಳ್ಳುವುದು ಅವಶ್ಯಕತೆಯಿದೆ. ಹೀಗಾಗಿ ರೈಲಿನಲ್ಲಿ ಉದ್ಯೋಗಕ್ಕಾಗಿ ಓಡಾಡುವ ರಾಯಚೂರು, ಕಲಬುರಗಿ ಉದ್ಯೋಗಿಗಳು ಎರಡು ವಾರಗಳ ಕಾಲ ನಗರಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಕಲಬುರಗಿಯಿಂದ ರಾಯಚೂರಿಗೆ ಉದ್ಯೋಗಕ್ಕಾಗಿ ಬರಬೇಡಿ

ಅಲ್ಲದೇ ಮುಜಾಗ್ರತಾ ಕ್ರಮವಾಗಿ ಜಿಲ್ಲೆಯಾದ್ಯಂತ 13 ಚೆಕ್ ಪೋಸ್ಟ್​​ಗಳನ್ನ ತೆರಯಲಾಗಿದ್ದು, ಇದರಲ್ಲಿ 5 ಅಂತರ್​ ರಾಜ್ಯ, 8 ಅಂತರ್ ಜಿಲ್ಲೆಗಳ ಚೆಕ್ ಪೋಸ್ಟ್​​​ಗಳನ್ನ ತೆರಯಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details