ರಾಯಚೂರು ಜಿಲ್ಲಾ ಪಂಚಾಯತ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಮೆರಿಟ್ ಆಧಾರದ ಮೇಲೆ ನೇಮಕಾತಿಗೆ ಅರ್ಜಿ ಕರೆಯಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಈ ಹುದ್ದೆಗಳ ಭರ್ತಿ ನಡೆಯುತ್ತದೆ. ಹುದ್ದೆಗಳು ತಾತ್ಕಾಲಿಕವಾಗಿದ್ದು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲಾಗುತ್ತದೆ.
ಹುದ್ದೆಗಳ ವಿವರ: ರಾಯಚೂರು ಜಿಲ್ಲಾ ಪಂಚಾಯತ್ನಿಂದ ಮನರೇಗಾ ಅಡಿಯಲ್ಲಿ ಬ್ಲಾಕ್ ಲೈವ್ಲಿಹುಡ್ ಎಕ್ಸ್ಪರ್ಟ್, ಬ್ಲಾಕ್ ಎನ್ಆರ್ಎಂ ಎಕ್ಸ್ಪರ್ಟ್ ಸೇರಿದಂತೆ ಒಟ್ಟು 8 ಹುದ್ದೆಗಳು.
ವಿದ್ಯಾರ್ಹತೆ: ಮಾಹಿತಿ ವಿಜ್ಞಾನ, ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್/ಜಿಇಒ ಸ್ಪೇಷಿಯಲ್ ಟೆಕ್ನಾಲಜಿ ಸೇರಿದಂತೆ ಇನ್ನಿತರ ವಿಷಯದಲ್ಲಿ ಬಿಇ, ಬಿಟೆಕ್ ಪದವಿ. ಬ್ಲಾಕ್ ಲೈವ್ಲಿಹುಡ್ ಎಕ್ಸ್ಪರ್ಟ್ ಹುದ್ದೆಗೆ ಕೃಷಿ ಆರ್ಥಿಕತೆ, ತೋಟಗಾರಿಕೆ, ಅರಣ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಒಂದು/ ಎರಡು ವರ್ಷದ ಅನುಭವ ಹೊಂದಿರಬೇಕು.
ವೇತನ : ಬ್ಲಾಕ್ ಜಿಐಎಸ್ ಎಕ್ಸ್ಪರ್ಟ್ ಹುದ್ದೆಗೆ 35 ಸಾವಿರ ರೂ ಮತ್ತು ಬ್ಲಾಕ್ ಲೈವ್ಲಿಹುಡ್ ಎಕ್ಸ್ಪರ್ಟ್ ಹುದ್ದೆಗೆ 30 ಸಾವಿರ ರೂ ವೇತನವಿದೆ.