ರಾಯಚೂರು:ಜಿಲ್ಲಾ ಪಂಚಾಯಿತಿಯ 9ನೇ ಸಾಮಾನ್ಯ ಸಭೆ ನಡೆಸಲಾಯಿತು. ಸಭೆ ಪ್ರಾರಂಭದಲ್ಲಿ ರೈತ ದಿನಾಚರಣೆ ಅಂಗವಾಗಿ ಎಲ್ಲರೂ ಎದ್ದು ನಿಂತು ರೈತರಿಗೆ ಗೌರವ ಸಲ್ಲಿಸಿದ್ರು.
ರಾಯಚೂರು ಜಿಪಂ ಸಭೆಯಲ್ಲಿ ಅನ್ನದಾತನಿಗೆ ನಮನ - ರಾಯಚೂರು ಜಿ.ಪಂ. ಸದಸ್ಯ ಅಮರೇಗೌಡ
ಜಿಲ್ಲಾ ಪಂಚಾಯಿತಿಯ 9ನೇ ಸಾಮಾನ್ಯ ಸಭೆ ನಡೆಸಲಾಯಿತು. ಸಭೆ ಪ್ರಾರಂಭದಲ್ಲಿ ರೈತ ದಿನಾಚರಣೆ ಅಂಗವಾಗಿ ಎಲ್ಲರೂ ಎದ್ದು ನಿಂತು ರೈತರಿಗೆ ಗೌರವ ಸಲ್ಲಿಸಿದ್ರು.

ಇನ್ನು ಸಭೆಯಲ್ಲಿ ಮಾತನಾಡಿದ ಸದಸ್ಯ ಜಿಪಂ ಸದಸ್ಯ ಅಮರೇಗೌಡ, ಹೊಲಕ್ಕೆ ಹೋಗಲು ರೈತರಿಗೆ ರಸ್ತೆ ಕಲ್ಪಿಸಲು ನಮಗೆ ಆಗುತ್ತಿಲ್ಲ. ಈ ಬಗ್ಗೆ ನರೇಗಾ ಯೋಜನೆಯಡಿ ರಸ್ತೆ ನಿರ್ಮಾಣ ಮಾಡುವಂತೆ ಜಿಪಂ ಅಧ್ಯಕ್ಷರು ಹಾಗೂ ಸಿಇಒಗೆ ಮನವಿ ಸಲ್ಲಿಸಿದ್ದೇನೆ. ಆದರೆ ನಮ್ಮ ಮನವಿಗೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವ ಕಂಪ್ಯೂಟರ್ ಆಪರೇಟರ್ ಹೇಳುವ ಕಾಮಗಾರಿಗಳನ್ನು ಜಿಲ್ಲಾ ಪಂಚಾಯಿತಿಯಿಂದ ಮಾಡಲಾಗುತ್ತಿದೆ. ಕನಿಷ್ಠ ಕಂಪ್ಯೂಟರ್ ಆಪರೇಟರ್ಗೆ ಇರುವ ಬೆಲೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.