ಕರ್ನಾಟಕ

karnataka

ETV Bharat / state

ಹಿಂದೂ-ಮುಸ್ಲಿಂ ಭಾವೈಕ್ಯತೆ ಮೆರೆದ ಖಾದರ್ ವಲಿಗಳ ಉರುಸ್ - undefined

ಮಂಜರ್ಲಾ ಗ್ರಾಮವು ಹಿಂದೂ-ಮುಸ್ಲಿಂರ ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ. ರಾಯಚೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್​​ ವಲಿ ಅವರ ಉರುಸ್ ನಡೆಯುತ್ತದೆ. ಜಿಲ್ಲೆಯ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಜನರು ಉರುಸ್​ಗೆ ಆಗಮಿಸುತ್ತಾರೆ.

ಉರುಸ್

By

Published : May 19, 2019, 2:42 PM IST

ರಾಯಚೂರು:ಸಾಮಾನ್ಯವಾಗಿ ಉರುಸ್ ಎಂದರೆ ಒಂದೇ ಕೋಮಿನ ಜನರು ಹೆಚ್ಚು ಸೇರುವುದು, ಒಂದೇ ಧಾರ್ಮಿಕ ಪದ್ಧತಿಯಂತೆ ಆಚಾರ ವಿಚಾರ ನಡೆಯುವುದನ್ನು ಕಾಣಬಹುದು. ಆದರೆ ಇಲ್ಲೊಂದು ಉರುಸ್​​ನಲ್ಲಿ ಮುಸ್ಲಿಂರಷ್ಟೇ ಅಲ್ಲದೇ ಹಿಂದೂಗಳು ಕೂಡ ಭಾಗವಹಿಸಿ ಮುಸ್ಲಿಂರ ಸಾಂಪ್ರದಾಯದಂತೆ ಪೂಜೆಗೈದು ಭಕ್ತಿ ಸಮರ್ಪಿಸುತ್ತಾರೆ.

ರಾಯಚೂರು ತಾಲೂಕಿನ ಕಮಲಾಪುರ ಗ್ರಾಮ ಪಂಚಾಯತ್​​ಗೆ ಒಳಪಡುವ ಮಂಜರ್ಲಾ ಗ್ರಾಮದ ಖಾದರ್ ವಲಿಗಳ ಉರುಸ್​​​ನಲ್ಲಿ ಈ ಎಲ್ಲಾ ದೃಶ್ಯಗಳನ್ನ ಕಾಣಬಹುದು. ಹೀಗಾಗಿ ಗಡಿಭಾಗದ ಮಂಜರ್ಲಾ ಗ್ರಾಮವು ಭಾವೈಕ್ಯತೆಯ ಪ್ರತಿರೂಪವಾಗಿ ನಿಂತಿದೆ. ರಾಯಚೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಮಂಜರ್ಲಾ ಗ್ರಾಮದಲ್ಲಿ ಕಳೆದ 49 ವರ್ಷಗಳಿಂದ ಖಾದರ್​​ ವಲಿ ಅವರ ಉರುಸ್ ನಡೆಯುತ್ತದೆ. ಜಿಲ್ಲೆಯ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದಲೂ ಜನರು ಉರುಸ್​ಗೆ ಆಗಮಿಸುತ್ತಾರೆ.

ಉರುಸ್ ಸಂಭ್ರಮ

ಉರುಸ್​ನಲ್ಲಿ ದರ್ಗಾದ ಪೀಠಾಧಿಪತಿಗಳು ಅವರ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮ ನೆರವೇರಿಸುತ್ತಾರೆ. ಆದರೆ ಪ್ರತಿ ವರ್ಷ ನಡೆಯುವ ಈ ಉರುಸ್ ಕೇವಲ ಮುಸ್ಲಿಂರು ಮಾತ್ರವಲ್ಲದೇ ಹಿಂದೂ ಬಾಂಧವರು, ಊರಿನ ಜನರು ಮಾತ್ರವಲ್ಲದೇ ಗಧಾರ್ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಆರ್ಥಿಕ, ಸಾಮಾಜಿಕವಾಗಿ ಜವಾಬ್ದಾರಿ ವಹಿಸಿಕೊಂಡು ನೆರವೇರಿಸುತ್ತಾರೆ.

ಖಾದರ್​​ ವಲಿ ಪ್ರಭುಗಳ ಹಿನ್ನೆಲೆ:

ಮಂಜರ್ಲಾ ಗ್ರಾಮದ ಖಾದರ್ ವಲಿ ಪ್ರಭುಗಳು ಮುಸ್ಲಿಂ ಮಹಮದೀಯ ಕುಟುಂಬಕ್ಕೆ ಸೇರಿದರೂ ಪ್ರಸಿದ್ಧ, ಪೂಜ್ಯ ಗುರು ದತ್ತಾತ್ರೆಯ ಸಂಪ್ರದಾಯಸ್ಥರಾಗಿದ್ದರು. ನಮಾಜ್ ಮಾಡುವ ಜೊತೆಗೆ ಗುಡಿ ಗುಂಡಾರಗಳಲ್ಲಿ ಭಜನೆ, ತತ್ವಪದ ಧಾರ್ಮಿಕ ಹಾಡುಗಳನ್ನ ಹಾಡುವ ಮೂಲಕ ಭಾವೈಕ್ಯತೆಯ ಕೇಂದ್ರ ವ್ಯಕ್ತಿಯಾಗಿದ್ದರು. ಅವರು 1975ರಲ್ಲಿ ದೇಹತ್ಯಾಗ ಮಾಡಿದ್ದು, ಅಂದಿನಿಂದ ಅವರ ಹೆಸರಿನಲ್ಲಿ ಉರುಸ್ (ಆರಾಧನೆ ) ಮಾಡಲಾಗುತ್ತಿದೆ.

ಖಾದರ್ ವಲಿ ಪ್ರಭುಗಳ ದಾರಿಯಲ್ಲೇ ಅವರ ಮಕ್ಕಳೂ ಕೂಡ ಸಾಗುವ ಮೂಲಕ ಭಾವೈಕ್ಯತೆ ಹಾಗೆಯೇ ಮುಂದುವರೆಯಲು ಕಾರಣರಾಗಿದ್ದಾರೆ.
ಖ್ಯಾತ ತತ್ವಪದ ಗಾಯಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗೂ ಹಿರಿಯ ಮಗನಾದ‌ ದಾದಾಪೀರ್ ಮಜರ್ಲಾ ಅವರ ನೇತೃತ್ವದಲ್ಲಿ ಸಹೋದರರಾದ ಚಾಂದ್ ಪೀರ್ ಮಂಜರ್ಲಾ, ಹುಸೇನ್ ಪೀರ್ ಮಂಜರ್ಲಾ ಅವರು ಆಚರಣೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಮೇ.18 ರಂದು ಉರುಸ್ ನಿಮಿತ್ತ ಶ್ರೀಗಳ ಅಂದರೆ ದಾದಾಪೀರ್ ಮಂಜರ್ಲಾ ಅವರ ಮನೆಯಿಂದ ಗಂಧದ ಮೆರವಣಿಗೆ ಹಾಗೂ ಇತರೆ ಧಾರ್ಮಿಕ ಕಾರ್ಯ ನೆರವೇರಿತು. ನಂತರ ಕೊಲ್ಕತ್ತಾದ ಹೆಸರಾಂತ ಹಿಂದುಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್‌ರ ಶಿಷ್ಯರಾದ ಪಂಡಿತ್ ಆಶಿಶ್ ಚಕ್ರವರ್ತಿ ಹಾಗೂ ನಿರಂಜನ ಬೋಸ್ ನೇತೃತ್ವದಲ್ಲಿ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು.

For All Latest Updates

TAGGED:

ABOUT THE AUTHOR

...view details