ಕರ್ನಾಟಕ

karnataka

ETV Bharat / state

ರಾಯಚೂರು: ಸಾವಿತ್ರಿಬಾಯಿ ಫುಲೆ ವೃತ್ತ ಅನಾವರಣ - ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ

ರಾಯಚೂರು ನಗರದ ನವೋದಯ ಕಾಲೇಜು ಬಳಿಯ ವೃತ್ತಕ್ಕೆ ಸಾವಿತ್ರಿಬಾಯಿ ಫುಲೆ ಹೆಸರು ನಾಮಕರಣ ಮಾಡಲಾಯಿತು. ಕಾರ್ಯಕ್ರಮಕ್ಕೆ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದರು.

raichur
ರಾಯಚೂರು: ಸಾವಿತ್ರಿಬಾಯಿ ಫುಲೆ ವೃತ್ತ ಅನಾವರಣ

By

Published : Jan 3, 2021, 3:40 PM IST

ರಾಯಚೂರು:ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜಯಂತಿ ನಡೆಯುತ್ತಿದ್ದು ರಾಯಚೂರು ನಗರದಲ್ಲಿ ಸಾವಿತ್ರಿಬಾಯಿ ಫುಲೆ ಅವರ ಹೆಸರಿನಲ್ಲಿ ವೃತ್ತ ಅನಾವರಣ ಮಾಡಲಾಯಿತು.

ಶಾಸಕ ಡಾ.ಶಿವರಾಜ್ ಪಾಟೀಲ್

ನಗರದ ನವೋದಯ ಕಾಲೇಜು ಬಳಿಯ ವೃತ್ತಕ್ಕೆ ಸಾವಿತ್ರಿಬಾಯಿ ಫುಲೆ ಹೆಸರು ನಾಮಕರಣ ಮಾಡಿ ಅನಾವರಣಗೊಳಿಸಲಾಯಿತು. ಕಾರ್ಯಕ್ರಮಕ್ಕೆ ಶಾಸಕ ಡಾ.ಶಿವರಾಜ್ ಪಾಟೀಲ್ ಚಾಲನೆ ನೀಡಿದರು.

ಸಾವಿತ್ರಿಬಾಯಿ ಫುಲೆಯವರು ಮಹಿಳೆಯರ ಹಕ್ಕುಗಳಿಗೆ, ಸಮಾನತೆಗಾಗಿ ಹೋರಾಟ ಮಾಡಿದ್ದು ದೇಶದ ಅಗ್ರಗಣ್ಯ ನಾಯಕರ ಸ್ಥಾನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಜಯಂತಿ ನಿಮಿತ್ತ ನಗರದಲ್ಲಿನ ವೃತ್ತಕ್ಕೆ ಅವರ ಹೆಸರಿಟ್ಟಿರುವುದು ಶ್ಲಾಘನೀಯ ಎಂದರು.

ಈ ವೇಳೆ ನಗರಸಭೆ ಅಧ್ಯಕ್ಷ ವಿನಯ ಕುಮಾರ್, ಆರ್‌ಡಿಎ ಚೇರ್ಮನ್ ಗೋಪಾಲರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details