ರಾಯಚೂರು:2020-2021ನೇ ಸಾಲಿನಲ್ಲಿ ರಾಯಚೂರು ವಿಶ್ವವಿದ್ಯಾಲಯದ ತರಗತಿಗಳನ್ನು ಆರಂಭಿಸಬೇಕು. ಇದಕ್ಕೆ ಬೇಕಾಗುವ ಅಗತ್ಯ ಸಿದ್ದತೆಗಳನ್ನು ತ್ವರಿತವಾಗಿ ಮಾಡಿಕೊಳ್ಳಲು ರಾಯಚೂರು ವಿವಿ ವಿಶೇಷಾಧಿಕಾರಿಗೆ ಸೂಚಿಸಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ರಾಯಚೂರು ವಿವಿಯ ತರಗತಿ ಆರಂಭಿಸಲು ಸೂಚನೆ
ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಯಚೂರು ವಿಶ್ವ ವಿದ್ಯಾಲಯದ ತರಗತಿಗಳನ್ನ ಪ್ರಾರಂಭಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
Gulbarga university
ಈಗಾಗಲೇ ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ರಾಯಚೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಆರಂಭವಾಗಿರುವ ತರಗತಿಗಳಿಗೆ ಗುಲ್ಬರ್ಗಾ ವಿವಿ ಯಡಿಯಲ್ಲಿಯೇ ಪರೀಕ್ಷೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ(ವಿಶ್ವವಿದ್ಯಾಲಯಗಳ-1) ಸರ್ಕಾರದ ಅಧೀನ ಕಾರ್ಯದರ್ಶಿ ಶೀತಲ್ ಎಂ.ಹಿರೇಮಠ ಆದೇಶಿಸಿದ್ದಾರೆ.
ಈ ಆದೇಶದ ಮೇರೆಗೆ ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಗೆ ಬರುವ ಪದವಿ ಕಾಲೇಜುಗಳು ಇನ್ನು ಮುಂದೆ ಉನ್ನತ ಶಿಕ್ಷಣ ಪಡೆಯಲು ರಾಯಚೂರು ತಾಲೂಕಿನ ಯರಗೇರಾ ಬಳಿಯ ರಾಯಚೂರು ವಿವಿಯಲ್ಲಿ ಪ್ರವೇಶವನ್ನ ಪಡೆಯಬಹುದಾಗಿದೆ.