ಕರ್ನಾಟಕ

karnataka

By

Published : May 18, 2020, 9:43 PM IST

ETV Bharat / state

ಗ್ರೀನ್​ ಝೋನ್​ನಲ್ಲಿದ್ದ ರಾಯಚೂರು ಆರೆಂಜ್​​​​ಗೆ: ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ

ಮಹಾರಾಷ್ಟ್ರದಿಂದ ಬಂದ ಆರು ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್​ ಮಾಡಿರುವುದು ತುಸು ಸಮಾಧಾನ ತಂದಿದೆ. ಉಳಿದಂತೆ ನಗರದಲ್ಲಿ ಜನಸಂದಣಿ ಹೆಚ್ಚಳವಾಗಿ ಕಂಡು ಬರುತ್ತಿದೆ. ಕೆಲವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನ ಕಾಯ್ದುಕೊಂಡರೆ, ಇನ್ನೂ ಕೆಲವರು ಎಲ್ಲ ನಿಯಮಗಳನ್ನು ಮರೆತು ಓಡಾಡುತ್ತಿರುವುದು ಸಹ ಕಂಡುಬಂದಿದೆ.

Raichur turned now as Orange Zone from Green Zone
ಗ್ರೀನ್​ ಝೋನ್​ನಲ್ಲಿದ್ದ ರಾಯಚೂರು ಆರೇಂಜ್​ ಝೋನ್​​​ಗೆ: ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ

ರಾಯಚೂರು:ಕೊರೊನಾ ಲಾಕ್​​ಡೌನ್ ಜಾರಿಯಾದಾಗಿನಿಂದ ಬಿಸಿಲೂರು ರಾಯಚೂರು ಜಿಲ್ಲೆ ಹಸಿರು ವಲಯದಲ್ಲಿ ಗುರುತಿಸಿಕೊಂಡಿತ್ತು. ಆದರೆ ಇದೀಗ 6 ಕೊರೊನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಆರೆಂಜ್ ಝೋನ್​​ ಎಂದು ಘೋಷಿಸಲಾಗಿದೆ. ಜಿಲ್ಲೆಯ ಜನತೆಯಲ್ಲಿ ಕೊರೊನಾ ಭೀತಿ ಶುರುವಾಗಿದ್ದು, ಯಾರು ಅನವಶ್ಯಕವಾಗಿ ಹೊರಗಡೆ ಓಡಾಡದೆ ಎಚ್ಚರವಹಿಸಬೇಕಾಗಿದೆ. ವಲಸೆ ಕಾರ್ಮಿಕರ ಮೇಲೆ ಜಿಲ್ಲಾಡಳಿತ ತೀವ್ರವಾಗಿ ನಿಗಾ ವಹಿಸಬೇಕಾಗಿದೆ.

ಜಿಲ್ಲೆಯಲ್ಲಿ ವ್ಯಾಪಾರ-ವಹಿವಾಟು ಶುರುವಾಗಿ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೂಲಿ ಕೆಲಸವನ್ನ ಅರಸಿಕೊಂಡು ಹೋಗಿರುವ ವಲಸೆ ಕಾರ್ಮಿಕರು, ಅನ್ಯ ರಾಜ್ಯಗಳಲ್ಲಿ ಸಿಲುಕಿದ್ದವರು ಮರಳಿ ತಮ್ಮ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಆದರೆ ಇದೀಗ ಮಹಾರಾಷ್ಟ್ರದ ಮುಂಬೈನಿಂದ ಆಗಮಿಸಿದ ವಲಸೆ ಕಾರ್ಮಿಕರಲ್ಲಿ ಕೊರೊನಾ ಸೋಂಕು ದೃಢಪಡುವ ಮೂಲಕ, ಗ್ರೀನ್ ಝೋನ್ ಆಗಿದ್ದ ನಗರ ಈಗ ಆರೆಂಜ್ ಝೋನ್ ಆಗಿದೆ.

ರಾಯಚೂರು ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ

ಆಟೋ ನಗರದ ಒಂದೇ ಕುಟುಂಬದ ಮೂವರು ಸದಸ್ಯರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಜನರು ಆತಂಕಗೊಂಡಿದ್ದರು. ಇನ್ನುಳಿದ ಮೂವರ ಪೈಕಿ ರಾಯಚೂರು ತಾಲೂಕಿನ ಸುಲ್ತಾನಪುರದ ಓರ್ವ, ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮದ ಇಬ್ಬರಿಗೆ ಸೋಂಕು ತಗುಲಿದೆ. ಸೋಂಕು ಹರಡಿದ ಆರು ಜನರಿಗೆ ಜಿಲ್ಲಾಡಳಿತ ಐಸೊಲೇಷನ್ ವಾರ್ಡ್​​ಗೆ ದಾಖಲಿಸಲಾಗಿದ್ದು, ಪ್ರಾಥಮಿಕ, ದ್ವೀತಿಯ ಸಂಪರ್ಕದ ಮಾಹಿತಿಯನ್ನ ಸಂಗ್ರಹಿಸಿ ಮುಂಜಾಗೃತ ಕ್ರಮ ಕೈಗೊಂಡಿರುವುದಾಗಿ ತಿಳಿಸಿದೆ. ಇನ್ನು ಕಂಟೈನ್ಮೆಂಟ್​​ ಝೋನ್, ಬಫರ್ ಝೋನ್​ಗಳನ್ನು ಗುರುತಿಸಿ, ಮೇ.31ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದೆ.

ಮಹಾರಾಷ್ಟ್ರದಿಂದ ಬಂದ ಈ ಆರು ಜನರನ್ನು ಜಿಲ್ಲಾಡಳಿತ ಕ್ವಾರಂಟೈನ್​ ಮಾಡಿರುವುದು ತುಸು ಸಮಾಧಾನ ತಂದಿದೆ. ಉಳಿದಂತೆ ನಗರದಲ್ಲಿ ಜನಸಂದಣಿ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನ ಕಾಯ್ದುಕೊಂಡರೆ, ಇನ್ನೂ ಕೆಲವರು ಎಲ್ಲ ನಿಯಮಗಳನ್ನು ಮರೆತು ಓಡಾಡುತ್ತಿದ್ದಾರೆ.

ಅಲ್ಲದೇ ವ್ಯಾಪಾರ-ವಹಿವಾಟು ಮಾಡುತ್ತಿರುವ ವ್ಯಾಪಾರಸ್ಥರು ಸಹ ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಳ್ಳವುದನ್ನು ಮರೆತಿರುವುದು ಕಂಡು ಬರುತ್ತಿದೆ. ಇಷ್ಟು ದಿನಗಳ ಕಾಲ ಹಸಿರು ವಲಯ ಎಂದು ಬಿಂಬಿತವಾಗಿದ್ದ ರಾಯಚೂರು ಜಿಲ್ಲೆಗೆ ಹೆಮ್ಮಾರಿ ಕೊರೊನಾ ಕಾಲಿಟ್ಟಿದ್ದು, ಜನರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಎಚ್ಚರವಹಿಸಬೇಕಿದೆ.

ABOUT THE AUTHOR

...view details