ರಾಯಚೂರು: ಮರಳು ತುಂಬಿದ ಟಿಪ್ಪರ್ ಹರಿದು 10 ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ನಡೆದಿದೆ.
ರಾಯಚೂರು: ಟಿಪ್ಪರ್ ಹರಿದು ಕುರಿ ಹಿಂಡು ಸಾವು - ರಾಯಚೂರು, ಟಿಪ್ಪರ್ ಹರಿದು ಕುರಿ ಸಾವು, ಜಿಲ್ಲೆಯ ದೇವದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮ, ಕನ್ನಡ ವಾರ್ತೆ, ಈ ಟಿವಿ ಭಾರತ
ಮರಳು ತುಂಬಿದ್ದ ಟಿಪ್ಪರ್ ಕುರಿಗಳ ಹಿಂಡಿನ ಮೇಲೆ ಹರಿದಿದ್ದು, ಪರಿಣಾಮ ಹತ್ತು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿದೆ.
![ರಾಯಚೂರು: ಟಿಪ್ಪರ್ ಹರಿದು ಕುರಿ ಹಿಂಡು ಸಾವು](https://etvbharatimages.akamaized.net/etvbharat/prod-images/768-512-3859216-thumbnail-3x2-hrs.jpg)
ಟಿಪ್ಪರ್ ಹರಿದು ಸಾವನ್ನಪ್ಪಿದ ಕುರಿಗಳು
ಜಿಲ್ಲೆಯ ದೇವದುರ್ಗ ತಾಲೂಕಿನ ಕರಡಿಗುಡ್ಡ ಗ್ರಾಮದ ಬಳಿ ಈ ದುರ್ಘಟನೆ ನಡೆದಿದ್ದು, ಕುರಿಗಾಹಿ ಮರಿಗೆಪ್ಪ ಎಂಬವರಿಗೆ ಸೇರಿದ 10 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ
ಟಿಪ್ಪರ್ ಹರಿದು ಸಾವನ್ನಪ್ಪಿದ ಕುರಿಗಳು
ಮರಳು ಸಾಗಿಸುತ್ತಿದ್ದ ಟಿಪ್ಪರ್ ಯಮರೂಪಿಯಂತೆ ವೇಗವಾಗಿ ಬಂದು ಕುರಿಗಳ ಹಿಂಡಿನ ಮೇಲೆ ಎರಗಿ ಪರಾರಿಯಾಗಲು ಯತ್ನಿಸಿದೆ. ತಕ್ಷಣ ಎಚ್ಚೆತ್ತ ಗ್ರಾಮಸ್ಥರು ಟಿಪ್ಪರ್ ಚೇಸ್ ಮಾಡಿ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಿಶೀಲಿಸಿದಾಗ ಟಿಪ್ಪರ್‌ಗೆ ನಂಬರ್ ಇಲ್ಲದಿರುವುದು ಪತ್ತೆಯಾಗಿದೆ. ಘಟನೆಯಿಂದ ಕುರಿಗಾಹಿ ಮರಿಗೆಪ್ಪಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.ಈ ಬಗ್ಗೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
TAGGED:
Vis, photos and script