ರಾಯಚೂರು:ಕಡ್ಡಾಯ ವರ್ಗಾವಣೆ ಕಾಯ್ದೆ ಶಿಕ್ಷಕರಿಗೆ ಮಾರಕವಾಗಿದ್ದು, ಇದನ್ನು ರದ್ದುಪಡಿಸಬೇಕು ಎಂದು ಆಗಹ್ರಹಿಸಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಕಡ್ಡಾಯ ವರ್ಗಾವಣೆಯ ದೋಷಪೂರಿತ ಪಟ್ಟಿ ಸರಿಪಡಿಸುವಂತೆ ಶಿಕ್ಷಕರ ಪ್ರತಿಭಟನೆ - Raichur teacers protest in ddpi office
ರಾಯಚೂರಿನಲ್ಲಿ ಶಿಕ್ಷಕರ ಕಡ್ಡಾಯ ವರ್ಗಾವಣೆಯ ನ್ಯೂನತೆಗಳನ್ನು ಸರಿಪಡಿಸಿ, ಇಲ್ಲದಿದ್ದರೆ ಕಾಯ್ದೆ ಕೈ ಬಿಡಿ ಎಂದು ಶಿಕ್ಷಕರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.
ಶಿಕ್ಷರ ಪ್ರತಿಭಟನೆ
ನಗರದ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು. ಕಡ್ಡಾಯ ವರ್ಗಾವಣೆಯಲ್ಲಿ ಎಲ್ಲರನ್ನೂ ಪರಿಗಣಿಸಿ, ದೋಷಪೂರಿತ ಪಟ್ಟಿಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ರದ್ದುಪಡಿಸಬೇಕು ಎಂದು ಮನವಿ ಮಾಡಿದರು.
ಟಿಡಿಎಸ್ ನಲ್ಲಿ ರಾಯಚೂರು ತಾಲೂಕಿನ ಶಿಕ್ಷಕರ ಮಾಹಿತಿ ಅಪೂರ್ಣವಾಗಿದ್ದು, ಕೂಡಲೇ ಸರಿಪಡಿಸಬೇಕು. ಕಡ್ಡಾಯ ವರ್ಗಾವಣೆಯಲ್ಲಿ ವಿನಾಯತಿ ಇದ್ದರೂ ವಿಧವೆಯರನ್ನು ಪಟ್ಟಿಯಲ್ಲಿ ಪರಿಗಣಿಸಿದ್ದಾರೆ ಎಂದು ಆಗ್ರಹಿಸಿದರು.