ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣವನ್ನ ಸಿಒಡಿ ತನಿಖೆ ಒಪ್ಪಿಸಿದ ಬೆನ್ನಲ್ಲೇ, ಎಲ್ಲಾ ಸಂಘಟನೆಗಳನ್ನ ಒಂದೇ ವೇದಿಕೆಯಡಿ ತರುವ ನಿಟ್ಟಿನಲ್ಲಿ ಪತ್ಯೇಕವಾಗಿ ಒಂದು ಹೋರಾಟ ಸಮಿತಿ ರಚಿಸಲಾಗಿದೆ.
ರಾಯಚೂರು ವಿದ್ಯಾರ್ಥಿನಿ ನಿಗೂಢ ಸಾವು... ಏ. 24ಕ್ಕೆ ಬೃಹತ್ ಪ್ರತಿಭಟನೆಗೆ ನಿರ್ಧಾರ - undefined
ರಾಯಚೂರು ಬಿಇ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 30 ಜನರ ಸಂಘಟನೆಗಳ ಹೋರಾಟ ಸಮಿತಿ ರಚೆನಯಾಗಿದೆ. ಹೋರಾಟವನ್ನ ತೀವ್ರಗೊಳಿಸುವ ಉದ್ದೇಶದಿಂದ ಈ ಸಮಿತಿ ರಚಿಸಲಾಗಿದ್ದು, ಎ.24 ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಜಸ್ಟಿಸ್ ಫಾರ್ ಮಧು ಹೋರಾಟ ಸಮಿತಿ ರಚನೆ
30 ಜನರ ಸಂಘಟನೆಗಳ ಹೋರಾಟ ಸಮಿತಿ ಇದಾಗಿದೆ. ಹೋರಾಟವನ್ನ ತೀವ್ರಗೊಳಿಸುವ ಉದ್ದೇಶದಿಂದ ಈ ಸಮಿತಿ ರಚಿಸಿಕೊಂಡು ಇದೀಗ ಏ.24 ರಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಕೃತ್ಯವೆಸಗಿದ ಆರೋಪಿಗಳಿಗೆ ಶಿಕ್ಷೆ ಆಗುವವರೆಗೂ ನಿರಂತರವಾಗಿ ಹೋರಾಟ ನಡೆಸುವ ಮೂಲಕ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವಿಗೆ ನ್ಯಾಯ ದೊರೆಯಬೇಕು. ಜತೆಗೆ ಇಂತಹ ಕೃತ್ಯಗಳು ಹೆಣ್ಣು ಮಕ್ಕಳ ಮೇಲೆ ನಡೆಯದಂತೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎನ್ನುವುದು ನಮ್ಮ ಹಕ್ಕೊತ್ತಾಯವಾಗಿದೆ ಎಂದು ಸಮಿತಿ ಸದಸ್ಯರಾದ ಚೇತನ ಮತ್ತು ಮಹೇಶ್ ತಿಳಿಸಿದರು.