ಕರ್ನಾಟಕ

karnataka

ETV Bharat / state

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಗೆ ಅಸಮಾಧಾನ

ವಿದ್ಯಾರ್ಥಿನಿ ಸಾವು ಪ್ರಕರಣದಲ್ಲಿ ಸಿಐಡಿ ತನಿಖೆಯ ವರದಿ ನಮಗೆ ದುಃಖ ತಂದಿದೆ. ಈ ಫಲಿತಾಂಶದ ಮೇಲೆ ನಮಗೆ ನಂಬಿಕೆಯಿಲ್ಲದ ಕಾರಣ ಮುಂದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತೇವೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ಮಾರುತಿ ಬಡಿಗೇರ್ ಹೇಳಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಯಿಂದ ಅಸಮದಾನ

By

Published : Jul 17, 2019, 5:33 PM IST

Updated : Jul 17, 2019, 6:52 PM IST

ರಾಯಚೂರು:ಇಂಜಿನಿಯರಿಂಗ್ ವಿದ್ಯಾರ್ಥಿನಿ ಅಮಾನುಮಾನಾಸ್ಪದ ಸಾವು ಪ್ರಕರಣ ಸಂಬಂಧ ಸಿಐಡಿ ತನಿಖೆ ನಡೆಸಿ ಅದು ಕೊಲೆಯಲ್ಲ ಆತ್ಮಹತ್ಯೆ ಎಂದು ವರದಿ ನೀಡಿದ್ದು, ಈ ಬಗ್ಗೆ ವಿಶ್ವಕರ್ಮ​ ಸಮಾಜದ ಮುಖಂಡ ಮಾರುತಿ ಬಡಿಗೇರ್ ಪ್ರತಿಕ್ರಿಯಿಸಿದ್ದಾರೆ.

ರಾಯಚೂರು ವಿದ್ಯಾರ್ಥಿನಿ ಸಾವು ಪ್ರಕರಣ: ಸಿಐಡಿ ತನಿಖೆಯಿಂದ ಅಸಮದಾನ

ಈ ಬಗ್ಗೆ ಮಾತನಾಡಿದ ಮಾರುತಿ ಬಡಿಗೇರ್ ಸಿಐಡಿ ತನಿಖೆಯ ವರದಿ ನಮಗೆ ದುಃಖ ತಂದಿದೆ. ಈ ಫಲಿತಾಂಶದ ಮೇಲೆ ನಮಗೆ ನಂಬಿಕೆಯಿಲ್ಲದ ಕಾರಣ ಮುಂದೆ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯಿಸುತ್ತೇವೆಂದು ಹೇಳಿದ್ದಾರೆ.

ಈ ಹಿಂದೆ ಪ್ರಕರಣವನ್ನು ತನಿಖೆಗೆ ಎಂದು ಸಿಐಡಿಗೆ ವಹಿಸಿದಾಗ ನಮಗೆ ಸರಕಾರ ಹಾಗೂ ತನಿಖಾ ತಂಡದ ಮೇಲೆ ಭರವಸೆಯಿತ್ತು. ಆದರೆ, ಇದು ಆತ್ಮಹತ್ಯೆ ಎಂದು ವರದಿ ನೀಡಿದ್ದು, ಬೇಸರ ಮೂಡಿಸಿದೆ. ಈ ಪ್ರಕರಣದಲ್ಲಿ ರಾಜಕೀಯ ಹಾಗೂ ದೊಡ್ಡ ಉದ್ಯಮಿಗಳ ಕೈವಾಡವಿದೆ. ಅಲ್ಲದೇ ಮರಣೋತ್ತರ ವರದಿಯಲ್ಲಿ ವೈದ್ಯರ ಕೈವಾಡವೂ ಇದ್ದು, ಸದ್ಯದಲ್ಲೇ ಅದನ್ನೂ ಬಹಿರಂಗ ಪಡಿಸುತ್ತೇವೆ ಎಂದು ತಿಳಿಸಿದರು.

ಡಿ.ಕೆ.ರವಿ, ದಾನಮ್ಮ ಮತ್ತಿತರ ಪ್ರಕರಣಗಳಲ್ಲಿ ಸಿಐಡಿ ಸೂಕ್ತ ನ್ಯಾಯ ಸಮ್ಮತ ವರದಿ ನೀಡಿಲ್ಲ. ಅದೇ ರೀತಿ ಈ ಪ್ರಕರಣದಲ್ಲೂ ಆಗಿದೆ. ಇಂದು ಸಂಜೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಸಿಬಿಐಗೆ ವಹಿಸಲು ಒತ್ತಾಯ ಮಾಡುತ್ತೇವೆ ಎಂದರು.

Last Updated : Jul 17, 2019, 6:52 PM IST

ABOUT THE AUTHOR

...view details