ರಾಯಚೂರು:ಜಿಲ್ಲೆಯಲ್ಲಿ ಇಬ್ಬರು ಕೊರೊನಾ ಶಂಕಿತ ವ್ಯಕ್ತಿಗಳು ಕಂಡುಬಂದಿದ್ದು, ಎರಡನೇ ವ್ಯಕ್ತಿಯಲ್ಲಿ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಕೊರೊನಾ ಶಂಕಿತ ಎರಡನೇ ವ್ಯಕ್ತಿಯ ವರದಿ ಕೂಡ ನೆಗೆಟಿವ್: ಡಿಸಿ ಸ್ಪಷ್ಟನೆ - ಕೊರೊನಾ ಸೋಂಕಿತ ಪ್ರಕರಣಗಳು
ರಾಯಚೂರು ಜಿಲ್ಲೆಯಲ್ಲಿ ಇದುವರೆಗೆ ಎರಡು ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ ಎರಡನೇ ಪ್ರಕರಣದ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.
ಸೋಂಕು ಹರಡದಂತೆ ತಡೆಯಲು ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 144 ಜಾರಿ ಮಾಡಲಾಗಿದೆ. ನಾಲ್ಕಕ್ಕಿಂತ ಹೆಚ್ಚು ಮಂದಿ ಗುಂಪಾಗಿ ಓಡಾಡುವಂತಿಲ್ಲ. ಮದುವೆ, ಸಮಾರಂಭಗಳನ್ನ ನಿಲ್ಲಿಸಲಾಗಿದೆ. ಆಹಾರ, ಮೆಡಿಕಲ್, ಆಸ್ಪತ್ರೆ, ನೀರು ಸೇರಿ ಅಗತ್ಯ ವಸ್ತುಗಳನ್ನು ಬಿಟ್ಟು, ವ್ಯಾವಹಾರಿಕ ವಾಣಿಜ್ಯ ಕೇಂದ್ರಗಳನ್ನ ಬಂದ್ ಮಾಡಿಸಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ 71 ಜನ ವಿದೇಶದಿಂದ ಬಂದಿದ್ದು, ಒಟ್ಟು 259 ಜನರನ್ನು ತಮ್ಮ ಮನೆಗಳಲ್ಲಿಯೇ ನಿಗಾದಲ್ಲಿ ಇರಿಸಲಾಗಿದೆ. ಸದ್ಯ ಜಿಲ್ಲೆಯಲ್ಲಿ ಐಸೋಲೇಷನ್ ವಾರ್ಡ್ ಖಾಲಿಯಿದೆ. ರೆಸ್ಟೋರೆಂಟ್ಗಳಲ್ಲಿ ಪಾರ್ಸಲ್ ಮಾತ್ರ ಕೊಡಲು ಸೂಚನೆ ನೀಡಲಾಗಿದೆ. ರಾಜ್ಯ ವಿಪತ್ತು ನಿಧಿಯಿಂದ ಥರ್ಮಲ್ ಸ್ಕ್ಯಾನರ್ , ಮಾಸ್ಕ್ , ಸ್ಯಾನಿಟೈಸರ್ ಖರೀದಿಸುತ್ತೇವೆ. ಔಷಧ ಅಂಗಡಿಗಳಲ್ಲಿ ಈ ಸರಕುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಈ ವೇಳೆ ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.