ರಾಯಚೂರು:ಪ್ರಾಣದ ಹಂಗು ತೊರೆದು ಪ್ರವಾಹದ ನಡುವೆ ಆ್ಯಂಬುಲೆನ್ಸ್ಗೆ ದಾರಿ ತೋರಿದ ಬಾಲಕನಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಲಭಿಸಿದೆ. ದೇವದುರ್ಗ ತಾಲೂಕಿನ ಹಿರೇರಾಯಕುಂಪಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವೆಂಕಟೇಶ್ಗೆ ಪ್ರಶಸ್ತಿ ಲಭಿಸಿದೆ.
ಅವತ್ತು ಆ್ಯಂಬುಲೆನ್ಸ್ಗೆ ದಾರಿ ತೋರಿದ್ದ ಬಾಲಕ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆ.. - ದೇವದುರ್ಗ ತಾಲೂಕಿನ ಹಿರೇರಾಯಕುಂಪಿ
2019ರ ಅಗಸ್ಟ್ 10ರಂದು ಕೃಷ್ಣಾ ನದಿಯಲ್ಲಿ ಭಾರಿ ಪ್ರವಾಹ ಬಂದಿತ್ತು. ಈ ವೇಳೆ ಹಿರೇರಾಯಕುಂಪಿ ಹಾಗೂ ಗೂಗಲ್ ಮಧ್ಯೆದಲ್ಲಿ ನದಿಯು ತುಂಬಿ ಹರಿಯುತ್ತಿತ್ತು. ಇದೇ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಒಂದು ಬರುತ್ತಿತ್ತು. ಅದು ಪ್ರವಾಹ ದಾಟಿ ಹೋಗುವುದು ಅಸಾಧ್ಯವಿತ್ತು. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಆ್ಯಂಬ್ಯುಲೆನ್ಸ್ಗೆ ಹರಿಯುವ ನೀರಿನ್ನೂ ಲೆಕ್ಕಿಸದೇ ದಾರಿ ತೋರಿಸುವ ಮೂಲಕ ಬಾಲಕ ಸಾಹಸ ಮೆರೆದಿದ್ದ.

ಆ ವಿಡಿಯೋ ಒಂದು ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸನ್ಮಾನಿಸಿತ್ತು. ಹಾಗೂ ಕೇರಳದ ಸ್ವಯಂಸೇವಾ ಸಂಸ್ಥೆ ಬಾಲಕನ ಮನೆ ಕಟ್ಟಿಸಿ ಕೊಡುವುದಕ್ಕೆ ಮುಂದಾಗಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಿದೆ. ಈ ಪ್ರಶಸ್ತಿ ಪಡೆದ ರಾಯಚೂರು ಜಿಲ್ಲೆಯ ಮೊದಲ ಬಾಲಕ ವೆಂಕಟೇಶ್ ಎಂಬುದು ವಿಶೇಷ. ಜನವರಿ 26ರ ಗಣರಾಜ್ಯೋತ್ಸವದಂದು ಶೌರ್ಯ ಪ್ರಶಸ್ತಿಯನ್ನ ಬಾಲಕ ಸ್ವೀಕರಿಸಲಿದ್ದಾನೆ.