ಕರ್ನಾಟಕ

karnataka

ETV Bharat / state

ರಾಯಚೂರು ಸೇಫ್​: ಇಂದು ಬಂದ ವರದಿಯಲ್ಲೂ ಇಲ್ಲ ಪಾಸಿಟಿವ್ - ರಾಯಚೂರು ಜಿಲ್ಲೆ

ರಾಯಚೂರು ಜಿಲ್ಲೆಯಲ್ಲಿ ಇದೂವರೆಗೆ ಯಾವುದೇ ಕೊರೊನಾ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ. ಇಂದು ಬಂದ 163 ವರದಿಯಲ್ಲಿಯೂ ಸಹ ಕೊರೊನಾ ನೆಗೆಟಿವ್​ ಇರುವುದಾಗಿ ತಿಳಿದುಬಂದಿದೆ.

Raichur
ರಾಯಚೂರು

By

Published : May 1, 2020, 10:10 PM IST

ರಾಯಚೂರು: ಜಿಲ್ಲೆಯಿಂದ ಇಂದು ಒಟ್ಟು 111 ಶಂಕಿತರ ಗಂಟಲಿನ ದ್ರವ ಮಾದರಿಯನ್ನು ವರದಿಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಇವರೆಗೆ ಒಟ್ಟು163 ಮಾದರಿಗಳ ವರದಿ ನೆಗೆಟಿವ್ ಎಂದು ಬಂದಿದೆ.

ಇದೂವರೆಗೆ ರಾಯಚೂರು ಜಿಲ್ಲಾದ್ಯಂತ 1,364 ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ 1,053 ವರದಿಗಳು ನೆಗೆಟಿವ್ ಎಂದು ತಿಳಿದು ಬಂದಿದೆ. 5 ವರದಿ ತಿರಸ್ಕತಗೊಂಡಿದ್ದು, 311 ಮಾದರಿಗಳ ಫಲಿತಾಂಶ ಬರುವುದು ಬಾಕಿಯಿದೆ. ಇಂದು ಆಸ್ಪತ್ರೆಗೆ ಒಬ್ಬರನ್ನು ದಾಖಲಿಸಿದ್ದು, ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಇನ್ನು ಫೀವರ್ ಕ್ಲಿನಿಕ್​​​ಗಳಲ್ಲಿ 402 ಜನರನ್ನು ಥರ್ಮಲ್ ಸ್ಕ್ರೀನಿಂಗ್​​ಗೆ ಒಳಪಡಿಸಲಾಗಿದೆ. ನಾನಾ ಕಡೆಯ ಸರ್ಕಾರಿ ಆಸ್ಪತ್ರೆ ಕ್ವಾರಂಟೈನ್​​​​ನಲ್ಲಿ 105 ಶಂಕಿತರನ್ನು ಇರಿಸಿ ನಿಗಾವಹಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಪಾಸಿಟಿವ್ ಪ್ರಕರಣ ಬಂದಿಲ್ಲವೆಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details