ರಾಯಚೂರು: ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ಟಿಪಿಎಸ್ನಲ್ಲಿ ಅವಘಡ ಸಂಭವಿಸಿದೆ. ವಿದ್ಯುತ್ ಕೇಂದ್ರದ ಒಂದನೇ ಘಟಕದಲ್ಲಿ ಕಲ್ಲಿದ್ದಲು ಸಂಗ್ರಹಗೊಂಡಿದ್ದ ಮೂರು ಬಂಕರ್‌ಗಳು ಕಳಚಿ ಬಿದ್ದಿವೆ. ಸುಮಾರು ದಿನಗಳಿಂದ ಕಲ್ಲಿದ್ದಲು ಮುಂದೆ ಸಾಗಿಸದೆ ಸಂಗ್ರಹಿಸಿಟ್ಟ ಪರಿಣಾಮ, ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ.
ಕಲ್ಲಿದ್ದಲು ಭಾರ ಹೆಚ್ಚಾಗಿದ್ದರಿಂದ ಬಂಕರ್‌ಗಳು ಕಳಚಿ ಬಿದ್ದಿವೆ. ಒಂದನೇ ಘಟಕದ ಬಾಯ್ಲರ್ ಬಳಿ ಘಟನೆ ನಡೆದಿದ್ದು, ಇದರಿಂದ ವಾಟರ್ ಲೈನ್ ಒಡೆದುಹೋಗಿದೆ. ಬಂಕರ್‌ಗಳಿಂದ ಮಿಲ್ ಮೂಲಕ ರವಾನಿಸಬೇಕಿದ್ದ ಕಲ್ಲಿದ್ದಲು ಲೋಡ್ ಹೆಚ್ಚಾಗಿ ಕುಸಿತವಾಗಿದೆ. ಕಳಚಿಬಿದ್ದ ಬಂಕರ್ಗಳ ಪುನರ್ ಜೋಡಣೆಗೆ ತಿಂಗಳುಗಟ್ಟಲೇ ಸಮಯ ಬೇಕಾಗುತ್ತದೆಯಂತೆ.