ರಾಯಚೂರು: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಿಂದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ ರಕ್ತ ಹಾಗೂ ಗಂಟಲು ದ್ರವದ ಮಾದರಿಗಳಲ್ಲಿ 17 ಜನರ ವರದಿಗಳು ಇಂದು ನೆಗೆಟಿವ್ ಬಂದಿವೆ.
ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಗೆ ಕಳುಹಿಸಿದ 17 ಜನರ ವರದಿ ನೆಗೆಟಿವ್ - ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಗೆ ಕಳುಹಿಸಿದ 17 ಜನರ ವರದಿ ನೆಗೆಟಿವ್
ಜಿಲ್ಲೆಯಲ್ಲಿ ಒಟ್ಟು 65 ಜನರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇನ್ನೂ 4 ಜನರ ಪರೀಕ್ಷಾ ವರದಿ ಬರುವುದು ಮಾತ್ರ ಬಾಕಿ ಉಳಿದಿವೆ.
![ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಗೆ ಕಳುಹಿಸಿದ 17 ಜನರ ವರದಿ ನೆಗೆಟಿವ್ Raichur](https://etvbharatimages.akamaized.net/etvbharat/prod-images/768-512-6755085-522-6755085-1586616542678.jpg)
ರಾಯಚೂರು ಜಿಲ್ಲೆಯಲ್ಲಿ ಪರೀಕ್ಷೆಗೆ ಕಳುಹಿಸಿದ 17 ಜನರ ವರದಿ ನೆಗೆಟಿವ್
ಜಿಲ್ಲೆಯಿಂದ ಇದುವರೆಗೂ ಒಟ್ಟು 65 ಜನರ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದರಲ್ಲಿ ಒಟ್ಟು 44 ಜನರ ವರದಿ ನೆಗೆಟಿವ್ ಎಂದು ಬಂದಂತಾಗಿದ್ದು, ಇನ್ನೂ 4 ಜನರ ಪರೀಕ್ಷಾ ವರದಿ ಬರುವುದು ಮಾತ್ರ ಬಾಕಿ ಉಳಿದಿದೆ.
ಸರ್ಕಾರಿ ಕಟ್ಟಡದಲ್ಲಿ ದಿಗ್ಬಂಧನದಲ್ಲಿರುವವ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದ್ದು, ಶನಿವಾರ 14 ಜನರನ್ನು ಹೊಸದಾಗಿ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಈ ಮೂಲಕ ಸರ್ಕಾರಿ ದಿಗ್ಬಂಧನದಲ್ಲಿರುವವರ ಸಂಖ್ಯೆ 89ಕ್ಕೆ ಏರಿದೆ.
Last Updated : Apr 11, 2020, 10:04 PM IST
TAGGED:
Raichur news