ರಾಯಚೂರು: ಕೋವಿಡ್-19 ಹಿನ್ನೆಲೆಯಲ್ಲಿ ರಾಯಚೂರಿನಲ್ಲಿ ತೆಗೆದಿರುವ ಕ್ವಾರಂಟೈನ್ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಆರೋಪಿಸಿದ್ದಾರೆ.
ಅವ್ಯವಸ್ಥೆಯ ಆಗರವಾದ ರಾಯಚೂರಿನ ಕ್ವಾರಂಟೈನ್ ಕೇಂದ್ರಗಳು: ಕಾರ್ಮಿಕರ ಅಸಮಾಧಾನ - Workers' allegation
ನಗರದ ಅಂಬೇಡ್ಕರ್ ಹಾಸ್ಟೆಲ್‌ನಲ್ಲಿ ತೆಗೆಯಲಾಗಿರುವ ಕ್ವಾರಂಟೈನ್ ಕೇಂದ್ರದಲ್ಲಿ ಸ್ವಚ್ಛತೆಯಿಲ್ಲ. ಶೌಚಾಲಯ, ಸ್ನಾನಗೃಹಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕ್ವಾರಂಟೈನ್ ಕೇಂದ್ರಗಳಲ್ಲಿ ನೀಡುತ್ತಿರುವ ಊಟ ಕಳಪೆ ಮಟ್ಟದಾಗಿದೆ. ಹೀಗಾಗಿ ಆಹಾರ ಸೇವಿಸಲು ಯೋಗ್ಯವಾಗಿರದೆ ಡಸ್ಟ್ ಬಿನ್ ಸೇರುತ್ತಿದೆ. ಇಂತಹ ಅವ್ಯವಸ್ಥೆ ತುಂಬಿದ ಕ್ವಾರಂಟೈನ್ ಕೇಂದ್ರದಲ್ಲಿ ನಾವು ಇರುವುದಾದರೂ ಹೇಗೆ? ಎಂದು ಕ್ವಾರಂಟೈನ್ ಕೇಂದ್ರದಲ್ಲಿರುವ ಕಾರ್ಮಿಕರು ಪ್ರಶ್ನಿಸಿದ್ದಾರೆ.

ಕ್ವಾರಂಟೈನ್ ಕೇಂದ್ರಗಳ ಈ ಅವ್ಯವಸ್ಥೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಹಾಗಾಗಿ ಕೂಡಲೇ ಸ್ವಚ್ಛತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಅನ್ನೋದು ಕಾರ್ಮಿಕರ ಆಗ್ರಹ.