ರಾಯಚೂರು: ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದ ತುಂಗಭದ್ರಾ ನದಿಯಲ್ಲಿ ನೀರು ತರಲು ತೆರಳಿದ ಕರಿವೀರೇಶ ಸ್ವಾಮಿ ದೇವಸ್ಥಾನದ ಅರ್ಚಕ ಲಿಂಗಪ್ಪ (50) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಅರ್ಚಕರ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿದೆ.
ತುಂಗಭದ್ರಾ ನದಿಯಲ್ಲಿ ನೀರು ತರಲು ಹೋದ ರಾಯಚೂರಿನ ಅರ್ಚಕ ನೀರುಪಾಲು! - raichur priest death
ನೀರು ತರಲು ಹೋದ ಕರಿ ವೀರೇಶ ಸ್ವಾಮಿ ದೇವಸ್ಥಾನದ ಅರ್ಚಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ರಾಯಚೂರಿನ ಅರ್ಚಕ ನೀರುಪಾಲು
ತುಂಗಭದ್ರಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ದೇವಾಲಯದ ಪೂಜೆಗಾಗಿ ಸ್ನಾನ ಮಾಡಿ, ನೀರು ತರಲು ತೆರಳಿದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎನ್ನಲಾಗುತ್ತಿದೆ.ಸಿಂಧನೂರು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಇದನ್ನೂ ಓದಿ:ಮಂಗಳೂರಿನ ಫಲ್ಗುಣಿ ನದಿ ದಂಡೆಗೆ ಹರಿದು ಬಂದ ತ್ಯಾಜ್ಯ: ಪರಿಸರ ಪ್ರೇಮಿಗಳಿಂದ ಸ್ವಚ್ಛತೆ ಕಾರ್ಯ