ರಾಯಚೂರು: ಕರ್ತವ್ಯ ನಿರತ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ಪೊಲೀಸ್ ಠಾಣೆಯನ್ನ ಸೀಲ್ಡೌನ್ ಮಾಡಲಾಗಿದೆ.
ದೇವದುರ್ಗದ ಕಾನ್ಸ್ಟೇಬಲ್ ಗೆ ಕೊರೊನಾ: ಪೊಲೀಸ್ ಠಾಣೆಯೇ ಸೀಲ್ಡೌನ್
ದೇವದುರ್ಗ ತಾಲೂಕಿನ ಪೊಲೀಸ್ ಕಾನ್ಸ್ ಟೇಬಲ್ ರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ.
ಜಿಲ್ಲೆಯ ದೇವದುರ್ಗ ತಾಲೂಕಿನ ಪೊಲೀಸ್ ಕಾನ್ಸ್ಟೇಬಲ್ ರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಿ, ಠಾಣೆಯನ್ನ ಸೀಲ್ ಡೌನ್ ಮಾಡಲಾಗಿದೆ. ಕಾನ್ಸ್ಟೇಬಲ್ ಗೆ ಸೋಂಕು ದೃಢ ಪಟ್ಟ ಹಿನ್ನೆಲೆ, ಆತನೊಂದಿಗೆ ಇರುವ ಪ್ರಾಥಮಿಕ, ದ್ವೀತಿಯ ಸಂಪರ್ಕ ಹೊಂದಿದ್ದವರ ಮಾಹಿತಿಯನ್ನ ಪತ್ತೆ ಹಚ್ಚುವ ಕಾರ್ಯ ನಡೆಸಲಾಗುತ್ತಿದೆ.
ಸೀಲ್ಡೌನ್ ಹಿನ್ನೆಲೆ, ಠಾಣೆಯ ಪಕ್ಕದಲ್ಲಿರುವ ಕೋಣೆಗಳಲ್ಲಿ ತಾತ್ಕಾಲಿಕವಾಗಿ ಠಾಣೆಯನ್ನ ಆರಂಭಿಸಲಾಗಿದ್ದು, ಸಾರ್ವಜನಿಕರು ಇಲ್ಲಿಗೆ ಬಂದು ತಮ್ಮ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಠಾಣೆಗೆ ಬಳಿ ಎಸ್.ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.