ರಾಯಚೂರು:ನಗರದಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪೂರ್ವ ವೃತ್ತ ಸಿಪಿಐ ಫಸೀಯುದ್ದೀನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿದ ನೇತಾಜಿನಗರ ಪಿಎಸ್ಐ ಶೀಲ ಮೂಗನಗೌಡ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಇಬ್ಬರು ಖತರ್ನಾಕ್ ಕಳ್ಳರ ಬಂಧನ: ಒಂದೂವರೆ ಲಕ್ಷ ಮೌಲ್ಯದ ಆಭರಣ ಜಪ್ತಿ - ರಾಯಚೂರಿನಲ್ಲಿ ಇಬ್ಬರ ಕಳ್ಳರ ಬಂಧನ
ರಾಯಚೂರಿನಲ್ಲಿ ಭರ್ಜರಿ ಕಾರ್ಯಾಚಣೆ ನಡೆಸಿದ ಪೊಲೀಸರು ಇಬ್ಬರು ಕಳ್ಳರನ್ನ ಬಂಧಿಸಿ 1 ಲಕ್ಷದ 56 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ವಶಕ್ಕೆ ಪಡೆದಿದ್ದಾರೆ.
ಇಬ್ಬರು ಖತರ್ನಾಕ್ ಕಳ್ಳರ ಬಂಧನ
ನಗರದ ಬಸ್ ನಿಲ್ದಾಣದಲ್ಲಿ ನ. 29ರ ರಾತ್ರಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿಯ ನಾಗಪ್ಪ ಅಲಿಯಾಸ್ ನಾಗರಾಜ ಹಾಗೂ ದೇವಪ್ಪ ಎಂಬುವರನ್ನು ಬಂಧಿಸಿ ಒಟ್ಟು 1 ಲಕ್ಷದ 56 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ಜಪ್ತಿ ಮಾಡಿದ್ದಾರೆ. ಪೊಲೀಸ್ ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ವೇದಮೂರ್ತಿ, ಎಎಸ್ಪಿ ಹರೀಬಾಬು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.