ರಾಯಚೂರು:ಕೋವಿಡ್ ತಡೆಯುವ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯಾದ್ಯಂತ ನಿನ್ನೆಯಿಂದ ಮೂರು ದಿನ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಇದರ ನಡುವೆಯೂ ನಗರದ ಶಶಿಮಹಲ್ ಸರ್ಕಲ್ನಲ್ಲಿ ತರಕಾರಿ ವ್ಯಾಪಾರ-ವಹಿವಾಟು ನಡೆಯುವ ದೃಶ್ಯ ಕಂಡು ಬಂತು. ಈ ವೇಳೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಮಾಸ್ಕ್ ಹಾಕದೆ ವ್ಯವಹರಿಸಿದ್ದಾರೆ. ತಳ್ಳು ಬಂಡಿಯಲ್ಲಿ ಹತ್ತಾರು ವ್ಯಾಪಾರಿಗಳು ತರಕಾರಿ ಮಾರಾಟ ಮಾಡಿದ್ರು. ಸುದ್ದಿ ತಿಳಿಯುತ್ತಿದ್ದಂತೆ ನಗರಸಭೆಯ ಅಧಿಕಾರಿಗಳು, ಪೊಲೀಸರು ಬಂದು ವ್ಯಾಪಾರಿಗಳನ್ನು ಕಳುಹಿಸಿ ಜಾಗ ಖಾಲಿ ಮಾಡಿಸಿದ್ರು.
ಸಂಪೂರ್ಣ ಲಾಕ್‌ಡೌನ್ ನಡುವೆಯೂ ರಾಯಚೂರಿನಲ್ಲಿ ತರಕಾರಿ ಮಾರಾಟ - raichur latest news
ಮೂರು ದಿನ ಸಂಪೂರ್ಣ ಲಾಕ್‌ಡೌನ್ ಆದೇಶದ ನಡುವೆಯೂ ನಗರದ ಶಶಿಮಹಲ್ ಸರ್ಕಲ್ನಲ್ಲಿ ತರಕಾರಿ ವ್ಯಾಪಾರ-ವಹಿವಾಟು ನಡೆಯುವ ದೃಶ್ಯ ಕಂಡು ಬಂದಿದೆ. ಬಳಿಕ ನಗರಸಭೆಯ ಅಧಿಕಾರಿಗಳು, ಪೊಲೀಸರು ಬಂದು ವ್ಯಾಪಾರಿಗಳನ್ನು ಕಳುಹಿಸಿ ಜಾಗ ಖಾಲಿ ಮಾಡಿಸಿದ್ರು.
ತರಕಾರಿ ಮಾರಾಟ
ಜಿಲ್ಲೆಯಲ್ಲಿ ಮೇ.19ರ ಮಧ್ಯಾಹ್ನರಿಂದ ಮೇ.22ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ಅನುವು ಮಾಡಿಕೊಡಲಾಗಿದೆ. ಲಾಕ್ಡೌನ್ನಿಂದಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಜನರು ಅನವ್ಯಶಕವಾಗಿ ಓಡಾಟ ನಡೆಸದಂತೆ ಬಿಗಿ ಪೊಲೀಸ್ ಬಂದ್ ಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ 9 ಸಾವಿರ ಜನರಿಗೆ ತಗುಲಿದ ಕೋವಿಡ್: ಪ್ರತಿ 100ರಲ್ಲಿ 34 ಮಂದಿಗೆ ಸೋಂಕು