ರಾಯಚೂರು:ನಾರಾಯಣ ಜಲಾಶಯದಿಂದ ನೂರಾರು ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕೃಷ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ತುಂಬಿ ಹರಿಯುವ ಕೃಷ್ಣ.. ಆದರೆ, ದೇವದುರ್ಗ ಪಟ್ಟಣಕ್ಕೆ ಕುಡಿಯೋ ನೀರಿಲ್ಲದೇ ಬಾಯಾರಿಕೆ.. - ನಾರಾಯಣ ಜಲಾಶಯ
ನಾರಾಯಣ ಜಲಾಶಯದಿಂದ ನೂರಾರು ಕ್ಯೂಸೆಕ್ ನೀರು ಬಿಟ್ಟ ಪರಿಣಾಮ ಕೃಷ್ಣ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದಲ್ಲಿರುವ ಪಟ್ಟಣಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಜನರು ಬೋರ್‌ವೆಲ್ ನೀರಿನ ಆಸರೆ ಪಡೆದುಕೊಂಡಿದ್ದಾರೆ.
![ತುಂಬಿ ಹರಿಯುವ ಕೃಷ್ಣ.. ಆದರೆ, ದೇವದುರ್ಗ ಪಟ್ಟಣಕ್ಕೆ ಕುಡಿಯೋ ನೀರಿಲ್ಲದೇ ಬಾಯಾರಿಕೆ..](https://etvbharatimages.akamaized.net/etvbharat/prod-images/768-512-4103439-thumbnail-3x2-httli.jpg)
ಕೃಷ್ಣ ನದಿಯಲ್ಲಿ ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದ್ದು, ಪಟ್ಟಣದಲ್ಲಿ ನಾಲ್ಕೈದು ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿ, ಜನರು ಬೋರ್‌ವೆಲ್ ನೀರಿನ ಆಸರೆ ಪಡೆದುಕೊಂಡಿದ್ದಾರೆ. ಪಟ್ಟಣಕ್ಕೆ ಕೃಷ್ಣ ನದಿಯ ನೀರಿನ್ನು ಕುಡಿಯುವ ಸರಬರಾಜು ಮಾಡಲಾಗುತ್ತಿತ್ತು. ಆದರೆ, ನಾರಾಯಣಪುರ ಜಲಾಶಯದಿಂದ 6.30 ಲಕ್ಷ ಕ್ಯೂಸೆಕ್ ನೀರು ಹರಿಯ ಬಿಡಲಾಗಿದ್ದು ಈ ಸಮಸ್ಯೆ ಎದುರಾಗಿದೆ.
ಅಲ್ಲದೇ ಗೂಗಲ್ ಗ್ರಾಮದ ಬಳಿ ನಿರ್ಮಿಸಿರುವ ಜಾಕ್‌ವೆಲ್ ಹಾಗೂ ವಿದ್ಯುತ್ ಪೂರೈಕೆ ಮಾಡುವ 110 ಕೆವಿ ಸ್ಟೇಷನ್ ನೀರಿನಿಂದ ಜಲಾವೃತಗೊಂಡಿದೆ. ಸುಮಾರು 22 ಕಿಲೋ ಮೀಟರ್ ದೂರದಲ್ಲಿ ಕೃಷ್ಣ ನದಿ ಉಕ್ಕಿ ಹರಿಯುತ್ತಿದೆ. ಆದರೆ, ಕುಡಿಯುವ ನೀರಿನ ಸಮಸ್ಯೆ ಪಟ್ಟಣಕ್ಕೆ ಎದುರಾಗಿದೆ.