ಕರ್ನಾಟಕ

karnataka

ETV Bharat / state

ರಾಯಚೂರು: ಸ್ನಾನಕ್ಕೆಂದು ಕಾಲುವೆಗಿಳಿದ ವ್ಯಕ್ತಿ ಸಾವು - Raichur one death

ಶವಸಂಸ್ಕಾರ ಮುಗಿಸಿ ಮರಳುವಾಗ ಸ್ನಾನಕ್ಕೆಂದು ಕಾಲುವೆಗಿಳಿದ ವ್ಯಕ್ತಿ ನೀರು ಪಾಲಾಗಿದ್ದಾರೆ.

eshwar
ಈಶ್ವರ

By

Published : Mar 22, 2022, 4:55 PM IST

ರಾಯಚೂರು:ಶವ ಸಂಸ್ಕಾರ ಮುಗಿಸಿ ಕಾಲುವೆಯಲ್ಲಿ ಸ್ನಾನಕ್ಕಿಳಿದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಾರಾಯಣಪುರ ಬಲದಂಡೆ ಕಾಲುವೆಯಲ್ಲಿ ನಡೆದಿದೆ. ಸಾವಿಗೀಡಾದ ವ್ಯಕ್ತಿಯನ್ನು ಈಶ್ವರ ಎಂದು ಗುರುತಿಸಲಾಗಿದೆ.

ಲಿಂಗಸುಗೂರು ತಾಲ್ಲೂಕು ಈಚನಾಳ ಗ್ರಾಮದ ವ್ಯಕ್ತಿಯೋರ್ವನ ಶವ ಸಂಸ್ಕಾರಕ್ಕೆ ಈಶ್ವರ ತೆರಳಿದ್ದರು. ಅಲ್ಲಿಂದ ಮರಳಿ ಬರುವಾಗ ಸ್ನಾನಕ್ಕೆಂದು ಕಾಲುವೆಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ನೀರಿನ ರಭಸ ಹೆಚ್ಚಿದ್ದುದರಿಂದ ಕೊಚ್ಚಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಮೃತದೇಹದ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಮೃತ ದುರ್ದೈವಿ ಈಚನಾಳ ಗ್ರಾಮದಲ್ಲಿ ಜೆಸ್ಕಾಂನಲ್ಲಿ ವಿದ್ಯುತ್ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಈಶ್ವರ ಕಾಲುವೆಯಲ್ಲಿ ನೀರು ಪಾಲಾದ ಸುದ್ದಿ ತಿಳಿದು ಸ್ನೇಹಿತರು, ಕುಟುಂಬಸ್ಥರು ಮುಖ್ಯ ಕಾಲುವೆ ಬಳಿ ಆಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು. ಈಶ್ವರನ ಮೋಟರ್ ಬೈಕ್, ಚಪ್ಪಲಿ ಹಾಗು ಬಟ್ಟೆ ಕಾಲುವೆ ದಡದಲ್ಲಿ ದೊರೆತಿದೆ.

ಇದನ್ನೂ ಓದಿ:ಕಾರು-ಬಸ್ ನಡುವೆ ಭೀಕರ ಅಪಘಾತ; ಬೇಲೂರಿನಲ್ಲಿ ಐವರು ವಿದ್ಯಾರ್ಥಿಗಳ ಸಾವು

ABOUT THE AUTHOR

...view details