ರಾಯಚೂರು:ನಗರದ ನಗರಸಭೆ ಕಚೇರಿ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ ಅವಿಶ್ವಾಸ ಮಂಡನೆ ಸಭೆಯಲ್ಲಿ 31 ಜನ ನಗರಸಭೆ ಸದಸ್ಯರು ಇ. ವಿನಯಕುಮಾರ್ ವಿರುದ್ಧ ಕೈ ಎತ್ತುವ ಮೂಲಕ ಅವಿಶ್ವಾಸ ಮಂಡನೆಯನ್ನು ಬೆಂಬಲಿಸಿದ್ದಾರೆ.
ನಗರಸಭೆಯ ಒಟ್ಟು 35 ಸದಸ್ಯರ ಬಲ ಹೊಂದಿದ್ದು, ಓರ್ವ ಸದಸ್ಯೆ ರೇಣಮ್ಮ ಸದಸ್ಯತ್ವ ಅನರ್ಹತೆ ಪ್ರಕರಣ ನ್ಯಾಯಾಲಯದಲ್ಲಿದ್ದು, ಮತದಾನಕ್ಕೆ ಅರ್ಹರಾಗಿದ್ದ 34 ಸದಸ್ಯರಲ್ಲಿ ಅವಿಶ್ವಾಸ ಗೊತ್ತುವಳಿ ಸಭೆಗೆ 31 ಸದಸ್ಯರು ಆಗಮಿಸಿದ್ದರು.
ನಗರಸಭೆ ಅಧ್ಯಕ್ಷ ಇ. ವಿನಯಕುಮಾರ್ ನಗರದ ಅಭಿವದ್ಧಿಗೆ ನಿರ್ಲಕ್ಷ್ಯ ವಹಿಸಿರುವುದು ಹಾಗೂ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂದು ಇತ್ತೀಚೆಗೆ ಸದಸ್ಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡುವ ಮೂಲಕ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಕೋರಿದ್ದರು. ಸದಸ್ಯರ ಮನವಿ ಮೇರೆಗೆ ಇಂದು ಕರೆಯಲಾಗಿದ್ದ ಸಭೆಯಲ್ಲಿ ಅವಿಶ್ವಾಸ ಮಂಡನೆ ಸಭೆಗೆ ಯಶಸ್ವಿಯಾಗಿದೆ.
ಸದಸ್ಯರ ಮನವಿ ಮೇರೆಗೆ ಶನಿವಾರ ಕರೆಯಲಾಗಿದ್ದ ಸಭೆಯಲ್ಲಿ ಅವಿಶ್ವಾಸ ಮಂಡನೆ ಸಭೆಗೆ ಯಶಸ್ವಿಯಾಗಿದೆ. ಕಚೇರಿಗೆ ಬಂದಿದ್ದ ಇ. ವಿನಯಕುಮಾರ್, ಸಭೆಗೆ ಬರದೆ ಇರುವುದರಿಂದ ಉಪಾಧ್ಯಕ್ಷೆ ನರಸಮ್ಮ ಮಾಡಗಿರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಇದನ್ನೂ ಓದಿ:ಮದರಸಾಗಳಲ್ಲಿ ರಾಜ್ಯ ಶಿಕ್ಷಣ ಪದ್ಧತಿ ಜಾರಿಗೆ ಕ್ರಮ: ಸಚಿವ ನಾಗೇಶ್