ರಾಯಚೂರು: ನಗರಸಭೆ ಕಚೇರಿಯಲ್ಲಿ ಕಡತಗಳಿಗೆ ಸ್ಥಳವಿಲ್ಲದೆ ಕೋಣೆಗಳ ಹೊರಗಡೆ ಗಂಟುಗಳನ್ನು ಕಟ್ಟಿಡಲಾಗಿದ್ದು, ಸಾರ್ವಜನಿಕರ ದಾಖಲೆಗಳಿಗೆ ರಕ್ಷಣೆ ಇಲ್ಲದಂತಾಗಿದೆ.
ರಾಯಚೂರು: ಗಂಟು ಮೂಟೆಗಳಲ್ಲಿ ಕಡತ ಸಂಗ್ರಹ, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ!
ರಾಯಚೂರು ಜಿಲ್ಲೆಯ ನಗರಸಭೆ ಕಚೇರಿಯಲ್ಲಿನ ಸಾರ್ವಜನಿಕರ ದಾಖಲೆಗಳನ್ನು ಸರಿಯಾದ ರೀತಿ ಸಂಗ್ರಹಿಸಿಟ್ಟಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ನಗರಸಭೆ ಕಚೇರಿಗೆ ಹೋಗುತ್ತಿದ್ದಂತೆಯೇ ವಿವಿಧ ಇಲಾಖೆಯ ಕೋಣೆಗಳ ಹೊರಗಡೆ ಗಂಟುಗಳು ತುಂಬಿದ ಕಡತಗಳು ಸಾರ್ವಜನಿಕರನ್ನು ಸ್ವಾಗತಿಸುತ್ತಿವೆ. ಇವು ಸುಮಾರು ವರ್ಷಗಳ ಕಡತಗಳಾಗಿದ್ದು, ಎಲ್ಲೆಂದರಲ್ಲಿ ಮೂಟೆ ಕಟ್ಟಿ ಇಡಲಾಗಿದೆ.
ಈ ಹಿಂದೆ ನಗರಸಭೆಯ ಹಳೆ ಕಚೇರಿಯಲ್ಲಿ ಅವೈಜ್ಞಾನಿಕವಾಗಿ ಕಡತಗಳನ್ನು ಸಂಗ್ರಹಿಸಿಟ್ಟಿದ್ದರ ಪರಿಣಾಮ ಬೆಂಕಿ ಅವಘಡ ಸಂಭವಿಸಿತ್ತು. ಹೀಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ದುರ್ಘಟನೆ ಸಂಭವಿಸುವ ಮುನ್ನ ಅನಾವಶ್ಯಕ ಕಡತಗಳನ್ನು ವಿಲೇವಾರಿ ಮಾಡಿ, ಅವಶ್ಯಕ ದಾಖಲೆಗಳಿಗೆ ಸೂಕ್ತ ರಕ್ಷಣೆ ನೀಡಲು ನಗರಸಭೆ ಅಧಿಕಾರಿಗಳು ಮುಂದಾಗಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.