ರಾಯಚೂರು:ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಫಲಿತಾಂಶವನ್ನ ಪ್ರಕಟಿಸಿದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿದ ಆರೋಪದಡಿ ಸದಸ್ಯತ್ವ ರದ್ಧತಿಗೆ ಒಳಗಾದ 31ನೇ ವಾರ್ಡ್ ನಗರಸಭೆ ಸದಸ್ಯೆ ರೇಣಮ್ಮ ಅವರಿಗೆ ಮತದಾನ ಮಾಡಲು ಅವಕಾಶ ನೀಡದ ಕಾರಣ ಅವರು ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ರೇಣಮ್ಮಗೆ ಗುಪ್ತ ಮತದಾನ ಮಾಡಲು ಅವಕಾಶ ನೀಡಿ ತೀರ್ಪು ಪ್ರಕಟಿಸದಂತೆ ಸೂಚಿಸಿದೆ.
ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ನಡೆಸಲು ಇಂದು ದಿನಾಂಕ ನಿಗದಿಯಾಗಿತ್ತು. ಅದರಂತೆ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ನಾಮಪತ್ರ ಸಲ್ಲಿಕೆ ಪ್ರಾರಂಭವಾಯಿತು. ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಮೂರು ನಾಮಪತ್ರ, ಉಪಾಧ್ಯಕ್ಷ ಸ್ಥಾನಕ್ಕೆ ಮೂರು ನಾಮಪತ್ರ ಸಲ್ಲಿಕೆಯಾಗಿದ್ದವು.
ನಾಮಪತ್ರ ಪರಿಶೀಲನೆ ಬಳಿಕ ಒಂದು ಗಂಟೆಯ ನಂತರ ನಾಮಪತ್ರ ಹಿಂಡಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ಈ.ವಿಜಯಕುಮಾರ್ ಎರಡು ನಾಮಪತ್ರ, ಸಾಜೀದ್ ಸಮೀರ್ ಒಂದು ನಾಮಪತ್ರ ಸಲ್ಲಿಸಿದ್ರು. ಇದರಲ್ಲಿ ಸಾಜೀದ್ ಸಮೀರ್ ನಾಮಪತ್ರ ವಾಪಸ್ ಪಡೆದುಕೊಂಡಿದ್ದಾರೆ. ಈ.ವಿನಯಕುಮಾರ್ ಸಲ್ಲಿಸಿದ ಎರಡು ನಾಮಪತ್ರಗಳ ಪೈಕಿ ಒಂದು ನಾಮಪತ್ರ ಪಡೆದುಕೊಂಡರು. ಹೀಗಾಗಿ ಅಂತಿಮವಾಗಿ ಈ.ವಿನಯಕುಮಾರ್ ಅವಿರೋಧ ಆಯ್ಕೆ ಖಚಿತವಾಯಿತು.
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಎಲ್ಲಾ ಮುಗಿದಿದ್ದು, ಇದೀಗ ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಇದರಿಂದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಫಲಿತಾಂಶಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ. ಮತದಾನ ಪ್ರಕ್ರಿಯೆಯಲ್ಲಿ ಶಾಸಕ ಡಾ. ಶಿವರಾಜ್ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ ಭಾಗವಹಿಸಿದ್ದರು.