ಕರ್ನಾಟಕ

karnataka

ETV Bharat / state

ರಾಯಚೂರು: ನಗರಸಭೆ ಸದಸ್ಯೆಯನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿದ ಪೊಲೀಸರು

ನಗರಸಭೆ ಸದಸ್ಯೆಯೊಬ್ಬರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ನಗರಸಭೆ ಸದಸ್ಯೆಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ
ನಗರಸಭೆ ಸದಸ್ಯೆಯನ್ನು ಪೊಲೀಸರು ವಶಕ್ಕೆ ಪಡೆದು, ಬಳಿಕ ಬಿಡುಗಡೆ

By

Published : Mar 23, 2021, 8:37 PM IST

ರಾಯಚೂರು: ನಗರಸಭೆ ಸದಸ್ಯೆಯೊಬ್ಬರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದು, ಬಳಿಕ ಬಿಡುಗಡೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರಸಭೆ ಸದಸ್ಯೆ ವಶಕ್ಕೆ, ಬಳಿಕ ಬಿಡುಗಡೆ

ನಗರ ವಾರ್ಡ್ 31ರ ಸದಸ್ಯೆ ರೇಣಮ್ಮಳನವರು ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸರಿಂದ ನಗರಸಭೆ ಸದಸ್ಯೆ ರೇಣಮ್ಮಳನ್ನು ವಶಕ್ಕೆ ಪಡೆದು, ನಗರದ ಸದರ್ ಬಜಾರ್​ಗೆ ಕರೆದುಕೊಂಡು ಹೋಗಲಾಯಿತು.

ಓದಿ:ಟಂಟಂ ಹಾಗೂ ಕಾರಿನ ನಡುವೆ ಡಿಕ್ಕಿ: ಇಬ್ಬರ ಸಾವು

ವಿಷಯ ತಿಳಿದ ನಗರಸಭೆ ಅಧ್ಯಕ್ಷ ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಲಬುರಗಿ ಹೈಕೋರ್ಟ್​ನಲ್ಲಿ ಕೇಸ್ ಇರುವ ಬಗ್ಗೆ ಪೊಲೀಸರಿಗೆ ದಾಖಲೆಗಳನ್ನ ತೋರಿಸಿದರು. ಬಳಿಕ ಸದಸ್ಯೆ ರೇಣಮ್ಮಳನ್ನ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ABOUT THE AUTHOR

...view details