ಕರ್ನಾಟಕ

karnataka

ETV Bharat / state

ಕೆಸರಟ್ಟಿ ಶಾಲೆಯಲ್ಲಿಂದು ಬ್ಯಾಗ್ ರಹಿತ ದಿನ: ಅಮ್ಮಂದಿರ ಗಾನಕ್ಕೆ ಮಕ್ಕಳು ದಿಲ್​​​​ ಖುಷ್​​ - undefined

ನಿತ್ಯ ಶಾಲೆಗೆ ಹೋಗುವಾಗ ವಿದ್ಯಾರ್ಥಿಗಳು ಭಾರವಾದ ಪುಸ್ತಕಗಳ ತುಂಬಿದ ಬ್ಯಾಗ್​ಗಳನ್ನು ಹೊತ್ತು ಹಾಜರಾಗುತ್ತಿದ್ದರು. ಆದರೆ ಇಂದು ರಾಯಚೂರಿನ ಶಾಲೆಯೊಂದರಲ್ಲಿ ಮಕ್ಕಳು ಬ್ಯಾಗ್ ತಂದಿಲ್ಲ ಬದಲಾಗಿ ತಾಯಂದಿರ ಕರೆತಂದು ಗಾಯಕಿಗಳನ್ನಾಗಿಸಿದ್ದಾರೆ.

ಕೆಸರಟ್ಟಿ ಶಾಲೆ

By

Published : Jul 22, 2019, 5:38 PM IST

ರಾಯಚೂರು:ಜಿಲ್ಲೆಯ ಲಿಂಗಸುಗೂರು ತಾಲೂಕಿನ ಸ.ಹಿ.ಪ್ರಾಥಮಿಕ ಶಾಲೆ ಕೆಸರಟ್ಟಿ ಶಾಲೆಯಲ್ಲಿ ಬ್ಯಾಗ್ ರಹಿತ ದಿನವನ್ನಾಗಿ ವಿಶೇಷವಾಗಿ ಆಚರಿಸಲಾಯಿತು.

ನಿತ್ಯ ಮಣಬಾರದ ಬ್ಯಾಗ್​ ಹೊತ್ತು ಶಾಲೆಗೆ ಬರುವ ಮಕ್ಕಳು ಇಂದು ಖುಷಿಯಿಂದ ನಗುತ್ತ ಶಾಲೆಗೆ ಬಂದರು. ಬ್ಯಾಗ್​​, ಪುಸ್ತಕ ಇಲ್ಲದೇ ಶಾಲೆಗೆ ಬಂದ ಮಕ್ಕಳು ದಿನವಿಡೀ ಶಾಲೆಯಲ್ಲಿ ಉತ್ಸಾಹದಿಂದ ಉಳಿಯಲು ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನ ಹಮ್ಮಿಕೊಳ್ಳಲಾಗಿತ್ತು. ಸೋಬಾನ ಪದ, ಜಾನಪದ, ಮತ್ತು ಬೀಸಕಲ್ಲು ಪದಗಳನ್ನ ಹಾಡುವ ತಾಯಂದಿರನ್ನ ಶಾಲೆಗೆ ಕರೆದು ಮಕ್ಕಳ ಮುಂದೆ ಹಾಡಿಸಲಾಯಿತು. ತಮ್ಮೊಳಗಿನ ಪ್ರತಿಭೆ ಈ ರೀತಿಯಾಗಿ ಅನಾವರಣಗೊಂಡಿದ್ದಕ್ಕೆ ತುಂಬಾ ಸಂತಸಗೊಂಡ ತಾಯಂದಿರು ಹಾಡುವುದಷ್ಟೇ ಅಲ್ಲದೇ ಆಸಕ್ತ ಮಕ್ಕಳಿಗೆ ಕಲಿಸುವ ಪ್ರಯತ್ನ ಕೂಡ ಮಾಡಿದರು.

ಅಮ್ಮಂದಿರ ಗಾನಕ್ಕೆ ಮಕ್ಕಳು ದಿಲ್​​​​ ಖುಷ್​​

ಅಳಿವಿನ ಅಂಚಿನಲ್ಲಿರುವ ಗ್ರಾಮೀಣ ಸೊಗಡು, ಪರಂಪರೆ, ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಈ ತರಹದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಗ್ರಾಮೀಣ ಕಲಾವಿದರ ಕಲೆಯಿಂದ ಬೆರಗುಗೊಂಡ ಶಾಲೆಯ ಶಿಕ್ಷಕರು ಅವರ ಪ್ರತಿಭೆಯನ್ನು ಕೊಂಡಾಡಿದರು.

For All Latest Updates

TAGGED:

ABOUT THE AUTHOR

...view details