ರಾಯಚೂರು :ಐಸ್‌ಕ್ರಿಮ್ ತಿಂದು ಮಕ್ಕಳು ಮೂರ್ಛೆ ಹೋದ ಘಟನೆ ಜಿಲ್ಲೆಯ ಸಿಂಗನೋಡಿ ಗ್ರಾಮದಲ್ಲಿ ನಡೆದಿದೆ.
ಐಸ್‌ಕ್ರಿಮ್ ತಿಂದು ಮೂರ್ಛೆ ಬಿದ್ದ ಮಕ್ಕಳು : ಮಾರಟಗಾರ ಎಸ್ಕೇಪ್ - ಸಿಂಗನೋಡಿ ಐಸ್‌ಕ್ರಿಮ್ ಸುದ್ದಿ
ರಾಯಚೂರು ಜಿಲ್ಲೆಯ ಸಿಂಗನೋಡಿ ಗ್ರಾಮದಲ್ಲಿ ಕಿರಾಣಿ ಅಂಗಡಿಯಲ್ಲಿ ದೊರೆತ ಐಸ್‌ಕ್ರಿಮ್ ತಿಂದ ಮಕ್ಕಳು ತಲೆ ಸುತ್ತಿ ಬಿದ್ದು ಮೂರ್ಛೆ ಹೋದ ಘಟನೆ ನಡೆದಿದ್ದು, ಘಟನೆ ನಡೆದ ಬಳಿಕ ಐಸ್‌ಕ್ರಿಮ್ ಮಾರಾಟಗಾರನಿಗಾಗಿ ಗ್ರಾಮಸ್ಥರು ಹುಡಕಾಟ ನಡೆಸಿದ್ದಾರೆ.
ಐಸ್‌ಕ್ರಿಮ್ ತಿಂದು ಮೂರ್ಛೆ ಬಿದ್ದ ಮಕ್ಕಳು
ತಾಲೂಕಿನ ಸಿಂಗನೋಡಿ ಗ್ರಾಮದಲ್ಲಿನ ಕಿರಾಣಿ ಅಂಗಡಿಯಲ್ಲಿ ಮೂರು ಮಕ್ಕಳು ಐಸ್‌ಕ್ರಿಮ್ ಖರೀದಿಸಿ, ಸೇವಿಸಿದ್ದಾರೆ. ಕೆಲ ಸಮಯದ ಬಳಿಕ ಐಸ್‌ಕ್ರಿಮ್ ಸೇವಿಸಿದ ಮಕ್ಕಳು ತಲೆ ಸುತ್ತಿಬಿದ್ದು, ಮೂರ್ಛೆ ಹೋಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಘಟನೆ ನಡೆದ ಬಳಿಕ ಐಸ್‌ಕ್ರಿಮ್ ಮಾರಾಟಗಾರನಿಗಾಗಿ ಗ್ರಾಮಸ್ಥರು ಹುಡಕಾಟ ನಡೆಸಿದ್ದಾರೆ. ಆದರೆ ಅಷ್ಟೊತ್ತಿಗೆ ಆಗಲೇ ಐಸ್‌ಕ್ರಿಮ್ ಮಾರಾಟಗಾರ ಗ್ರಾಮದಿಂದ ತೆರಳಿದ್ದಾನೆ. ಅಸ್ವಸ್ಥರಾದ ಮಕ್ಕಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಗ್ರಾಮದ ಪೊಷಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.