ರಾಯಚೂರು: ನಿರಂತರ ಸುರಿಯುತ್ತಿರುವ ಮಳೆಗೆ ಭಾಗಶಃ ನಗರ ಜಲಾವೃತಗೊಂಡಿದ್ದು, ನೀರು ತುಂಬಿರುವ ಸ್ಥಳಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದಾರೆ.
ಜಿಲ್ಲೆಯ ಜನತಾ ತುರ್ತು ಸೇವೆಗೆ ಇರುವ ರಿಮ್ಸ್ ಆಸ್ಪತ್ರೆ ಆವರಣದಲ್ಲಿ ಮಳೆ ನೀರು ನುಗ್ಗಿದೆ. ಆವರಣದಲ್ಲಿ ನೀರು ನುಗ್ಗಿರುವುದರಿಂದ ಆಸ್ಪತ್ರೆಗೆ ಹೋಗಲು ರೋಗಿಗಳು ಮತ್ತು ಸಂಬಂಧಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಆಂಬ್ಯುಲೆನ್ಸ್‌ಗಳ ಓಡಾಟಕ್ಕೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.
ವಿಪರೀತ ಮಳೆಗೆ ಜಲಾವೃತಗೊಂಡ ಪ್ರದೇಶಗಳಿಗೆ ಡಿಸಿ ಭೇಟಿ ಆರ್‌ಟಿಒ ಸರ್ಕಲ್, ಕೆಎಸ್‌ಆರ್‌ಟಿ ಮುಖ್ಯ ದ್ವಾರ, ರೈಲ್ವೆ ನಿಲ್ದಾಣ ಬಳಿಯ ಹೈವೇ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದು, ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಬಸವನಭಾವಿ ಸರ್ಕಲ್, ಚಂದ್ರಮೌಳೇಶ್ವರ ಸರ್ಕಲ್, ಡ್ಯಾಡಿ ಕಾಲೋನಿ, ಸಿಯಾತಲಾಬ್, ಜಲಾಲನಗರ, ನೀರುಬಾವಿಕುಂಟಾ, ಜಹೀರಾಬಾದ್, ಜವಾಹರನಗರ ಭಾಗಶಃ ಮಳೆ ನೀರಿನಿಂದ ಜಲಾವೃತಗೊಂಡಿವೆ. ನಗರದ ಹೊರವಲಯದ ಯರಮರಸ್ ನಗರದ ಮನೆಗಳಿಗೆ ನೀರು ನುಗ್ಗಿದೆ.
ನೀರಿನಿಂದ ಆವೃತವಾದ ಅನೇಕ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿಯನ್ನ ವಿಕ್ಷೀಸಿದರು. ಸದ್ಯ ನಗರದಲ್ಲಿ ಜಿಟಿ ಜಿಟಿ ಮಳೆ ಮುಂದುವರೆದಿದ್ದು, ಬಿಸಿಲು ನಗರಿ ಇದೀಗ ಮಳೆಗೆ ನಲುಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗಲಿದೆ.