ರಾಯಚೂರು: ಹಟ್ಟಿ ಚಿನ್ನದ ಗಣಿ ಕಂಪನಿ ವ್ಯಾಪ್ತಿಯ ಊಟಿ ಗೋಲ್ಡ್ ಮೈನ್ಸ್‌ನಲ್ಲಿ ನಿನ್ನೆ ರಾತ್ರಿ ಮೇಲ್ಭಾಗದ ಕಲ್ಲು ಬಿದ್ದು ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ವೇಳೆ, ಇಬ್ಬರು ಗಾಯಗೊಂಡಿದ್ದಾರೆ.
ಮೃತಪಟ್ಟ ಕಾರ್ಮಿಕನನ್ನು ಯಲ್ಲಪ್ಪ ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಪಾಳೆಯದ ಕಾರ್ಮಿಕರು 700ರಿಂದ 800 ಅಡಿ ಆಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಮಯದಲ್ಲಿ ಮೇಲ್ಭಾಗದ ಕಲ್ಲು ಸಡಿಲಗೊಂಡು ಕಾರ್ಮಿಕರ ಮೇಲೆಯೇ ಉರುಳಿದೆ.